ಧಾರವಾಡ: ಹುಬ್ಬಳ್ಳಿ, ಧಾರವಾಡ ಮಧ್ಯೆ ಜಾರಿಗೆ ತಂದಿರುವ ಬಿಆರ್‌ಟಿಎಸ್ ಯೋಜನೆ ಆಗಿರಬಹುದು ಅಥವಾ ಚಿಗರಿ ಹೆಸರಿಟ್ಟುಕೊಂಡಿರುವ ಆ ಬಸ್ಸಿನಲ್ಲಿ ಒಂದಿಲ್ಲೊಂದು ಅವಾಂತರಗಳು ನಡೆಯುತ್ತಲೇ ಇರುತ್ತವೆ.
ಈಗೇನಪ್ಪಾ ಆಯ್ತು ಅಂತೀರಾ? ಬಿಆರ್‌ಟಿಎಸ್ ಬಸ್ಸಿನ ಚಕ್ರದಲ್ಲಿ ಬೆಂಕಿ ಕಾಣಿಸಿಕೊಂಡು ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ಧಾರವಾಡದ ಎಸ್‌ಡಿಎಂ ಬಳಿ ನಡೆದಿದೆ.
ಧಾರವಾಡದಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಬಸ್ಸಿನ ಹಿಂಬದಿ ಚಕ್ರದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಪ್ರಯಾಣಿಕರನ್ನು ಕೆಳಗಿಳಿಸಿ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.
Kshetra Samachara
30/12/2021 04:47 pm