ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ರಾ.ಹೆ ಯಲ್ಲಿ ಭೀಕರ ರಸ್ತೆ ಅಪಘಾತ; ಓರ್ವ ಸ್ಥಳದಲ್ಲೇ ಸಾವು, ಇನ್ನೋರ್ವ ಸ್ಥಿತಿ ಗಂಭೀರ

ಅಣ್ಣಿಗೇರಿ: ಅಣ್ಣಿಗೇರಿ ಸಮೀಪ ಭೀಕರ ರಸ್ತೆ ಅಪಘಾತದಲ್ಲಿ ಟಂ ಟಂ ವಾಹನಕ್ಕೆ ಕಾರೊಂದು ಹಿಂಬದಿಯಿಂದ ಗುದ್ದಿದ ಪರಿಣಾಮ ಒಬ್ಬ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ, ಮತ್ತೋರ್ವನಿಗೆ ಗಂಭೀರ ಗಾಯವಾದ ಘಟನೆ ಬೆಳಗಿನ ಜಾವ ಒಂದು ಗಂಟೆಯ ಸುಮಾರಿಗೆ ನಡೆದಿದೆ.

ಪ್ಲಾಸ್ಟಿಕ್ ಗ್ಲಾಸ್ ಹೊತ್ತೊಯ್ಯುತ್ತಿದ್ದ ಟಂ ಟಂ ವಾಹನಕ್ಕೆ ಹಿಂಬದಿಯಿಂದ ಕಾರು ಗುದ್ದಿದ ಪರಿಣಾಮ ಮಲ್ಲಿಕಾರ್ಜುನ ಎಂಬುವ ವ್ಯಕ್ತಿ ಸ್ಥಳದಲ್ಲೇ ಮೃತ ಪಟ್ಟರೇ, ಸಂಗಮೇಶ್ ಎಂಬುವವನಿಗೆ ಗಂಭೀರ ಗಾಯಗಳಾಗಿವೆ. ಇನ್ನು ಇಬ್ಬರು ಸಹೋದರರಂದು ತಿಳಿದು ಬಂದಿದ್ದು, ಹುಬ್ಬಳ್ಳಿಯ ಬಿಡ್ನಾಳ ನಿವಾಸಿಗಳಾಗಿದ್ದಾರೆ. ಟಂ ಟಂ ವಾಹನ ಹುಬ್ಬಳ್ಳಿಯಿಂದ ಗದಗಿನ ಕಡೆಗೆ ತೆರಳುವ ವೇಳೆ ಅಣ್ಣಿಗೇರಿ ತಾಲೂಕಿನ ಭದ್ರಾಪೂರ ಗ್ರಾಮದ ಬಳಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಇನ್ನು ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಅಣ್ಣಿಗೇರಿ ಪೊಲೀಸರು ಶೋಧ ಕಾರ್ಯ ಕೈಗೆತ್ತಿಕೊಂಡಿದ್ದಾರೆ.

Edited By : Manjunath H D
Kshetra Samachara

Kshetra Samachara

30/12/2021 10:41 am

Cinque Terre

39.16 K

Cinque Terre

1

ಸಂಬಂಧಿತ ಸುದ್ದಿ