ಹುಬ್ಬಳ್ಳಿ:ಬೆಂಗಳೂರಿಗೆ ಹೋಗಬೇಕಾದ ರೈಲು ಹತ್ತುವ ಬದಲು ಬೆಳಗಾವಿ ರೈಲು ಹತ್ತಿ, ಗೊತ್ತಾದ ತಕ್ಷಣವೇ ಇಳಿಯಲು ಹೋಗಿ ಕೆಳಗೆ ಬಿದ್ದು ಸೂಪರಿಟೆಂಡೆಂಟ್ ಇಂಜಿನಿಯರ್ ಸಾವಿಗೀಡಾದ ಘಟನೆ ನಿನ್ನೆ ತಡರಾತ್ರಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಬೆಂಗಳೂರಿನ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಂಗರಾಜು ಎಸ್.ಎ ಎಂಬುವವರೇ ಸಾವಿಗೀಡಾದ ದುರ್ದೈವಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ರೇಲ್ವೆ ಪೊಲೀಸ್ ಅಧಿಕಾರಿಗಳು ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Kshetra Samachara
20/12/2021 09:56 am