ಧಾರವಾಡ: ಶಾರ್ಟ್ ಸರ್ಕೀಟ್‌ನಿಂದ ಕಬ್ಬಿನ ಹೊಲಕ್ಕೆ ಬೆಂಕಿ ತಗುಲಿ ಅಪಾರ ಪ್ರಮಾಣದ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾದ ಘಟನೆ ಧಾರವಾಡ ತಾಲೂಕಿನ ದೇವರಹುಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.
ನೂರ್ ಅಹ್ಮದ್ ಮುಲ್ಲಾ, ಖಾದರ್‌ಸಾಬ್ ಮುಲ್ಲಾ, ನಜೀರ್ ಅಹ್ಮದ್ ಹಾಗೂ ಮಹ್ಮದಗೌಸ್ ಮುಲ್ಲಾ ಎಂಬುವವರಿಗೆ ಸೇರಿದ 30 ರಿಂದ 35 ಎಕರೆ ಕಬ್ಬಿನ ಗದ್ದೆಗೆ ಬೆಂಕಿ ತಗುಲಿದೆ.
ಶಾರ್ಟ್ ಸರ್ಕೀಟ್‌ನಿಂದ ಈ ಕಬ್ಬಿನ ಗದ್ದೆಗೆ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲಿ ಇಡೀ ಹೊಲಕ್ಕೆ ಬೆಂಕಿ ಆವರಿಸಿದೆ. ಸ್ಥಳಕ್ಕೆ ಹೋದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಹರಸಾಹಸಪಡಬೇಕಾಯಿತು.
Kshetra Samachara
18/12/2021 06:42 pm