ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯ ನವನಗರದಲ್ಲಿ ಸರಣಿ ಬೈಕ್ ಅಪಘಾತ: ಸವಾರರಿಗೆ ಗಂಭೀರ ಗಾಯ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಟ್ರಾಫಿಕ್ ಕಿರಿ ಕಿರಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅಲ್ಲದೇ ಇಂತಹ ಟ್ರಾಫಿಕ್ ನಲ್ಲಿಯೇ ವೇಗವಾಗಿ ಚಲಿಸುವಂತ ಸಂದರ್ಭದಲ್ಲಿ ಮೂರು ಬೈಕ್ ಗಳ ಮಧ್ಯೆ ಸರಣಿ ಅಪಘಾತವಾಗಿರುವ ಘಟನೆ ನವನಗರದ ಪೊಲೀಸ್ ಆಯುಕ್ತರ ಕಚೇರಿಯ ಹತ್ತಿರ ನಡೆದಿದೆ.

ವೇಗವಾಗಿ ಚಲಿಸಿಕೊಂಡು ಬಂದ ಮೂರು ಬೈಕ್ ಗಳ ನಡುವೆ ಸರಣಿ ಅಪಘಾತ ಉಂಟಾಗಿದ್ದು, ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ‌ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಇನ್ನೂ ಗಾಯಗೊಂಡ ಬೈಕ್ ಸವಾರರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ಘಟನೆ ಉತ್ತರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Edited By : Nagesh Gaonkar
Kshetra Samachara

Kshetra Samachara

25/11/2021 05:12 pm

Cinque Terre

94.22 K

Cinque Terre

2

ಸಂಬಂಧಿತ ಸುದ್ದಿ