ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪಾದಚಾರಿಗೆ ಗುದ್ದಿದ ಚಿಗರಿ

ಧಾರವಾಡ: ರಸ್ತೆ ದಾಟಿ ಹೊರಟಿದ್ದ ಪಾದಚಾರಿಯೊಬ್ಬರಿಗೆ ಬಿಆರ್‌ಟಿಎಸ್‌ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಧಾರವಾಡದ ಕೋರ್ಟ್‌ ವೃತ್ತದ ಬಳಿ ನಡೆದಿದೆ.

ಮಲ್ಲಣ್ಣ ಎಂಬಾತನೇ ಈ ಘಟನೆಯಲ್ಲಿ ಗಾಯಗೊಂಡ ವ್ಯಕ್ತಿ. ಬಿಆರ್‌ಟಿಎಸ್ ಬಸ್ ನಿಲ್ದಾಣದಿಂದ ಈ ವ್ಯಕ್ತಿ ಇಳಿದು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಗಾಯಗೊಂಡ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Edited By : Nagaraj Tulugeri
Kshetra Samachara

Kshetra Samachara

14/11/2021 08:54 am

Cinque Terre

48.36 K

Cinque Terre

32

ಸಂಬಂಧಿತ ಸುದ್ದಿ