ಕಲಘಟಗಿ: ವಾಯವ್ಯ ಸಾರಿಗೆ ಬಸ್ ಪಲ್ಟಿಯಾದ ಘಟನೆ ಕಲಘಟಗಿ ತಾಲ್ಲೂಕು ಗಳಗಿ ಹುಲಕೊಪ್ಪ ಹಾಗೂ ಶಿವಪುರ ಮಾರ್ಗಮಧ್ಯ ಇಂದು ಮಧ್ಯಾಹ್ನ ನಡೆದಿದೆ.
ಧಾರವಾಡ ವಿಭಾಗದ ಹಳಿಯಾಳ ಡಿಪೋ ಬಸ್ ಇದಾಗಿದ್ದು ಗಳಗಿ ಹುಲಕೊಪ್ಪ ಗ್ರಾಮದಿಂದ ಧಾರವಾಡ ಕಡೆಗೆ ಹೊರಟಿತ್ತು. ಈ ರಸ್ತೆ ತೀರಾ ಹದಗೆಟ್ಟಿದ್ದು, ಇದೇ ಕಾರಣಕ್ಕೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ ಎಂಬುದು ಸ್ಥಳೀಯರ ಹೇಳಿಕೆ. ಬಸ್ ಪಲ್ಟಿಯಾದ ವೇಳೆ ಬಸ್ ನಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಪ್ರಯಾಣಿಸುತ್ತಿದ್ದರು. ಇಬ್ಬರಿಗೆ ಗಾಯಗಳಾಗಿದ್ದು ಎಲ್ಲ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Kshetra Samachara
13/11/2021 03:53 pm