ಹುಬ್ಬಳ್ಳಿ: ಚಿಕ್ಕ ಮಕ್ಕಳನ್ನು ವಾಹನದ ಮೇಲೆ ಕರೆದುಕೊಂಡು ಹೋಗುವಾಗ ಎಚ್ಚರದಿಂದ ಇರಬೇಕು. ಇಲ್ಲವಾದರೆ ನಿಮಗು ಇಂತಹ ಘಟನೆ ಆಗಬಹುದು.
ಬೈಕ್ ಸವಾರನೊಬ್ಬ ಮಧ್ಯದಲ್ಲಿ ಬೈಕ್ ನಿಲ್ಲಿಸಿ ಬೇರೆಯವರ ಜೊತೆ ಮಾತನಾಡುವಾಗ ಬಾಲಕ ವಾಹನದ ಎಕ್ಸಿಲೇಟರ್‌ನ್ನು ಜೋರಾಗಿ ಹಿಡಿದ ಪರಿಣಾಮ. ಕ್ಷಣಾರ್ಥದಲ್ಲೆ ಬೈಕ್ ಮುಂದೆ ಬಿದ್ದಿರುವ ಘಟನೆ, ಹುಬ್ಬಳ್ಳಿಯ ಚಂದ್ರನಾಥನಗರದ ಗಣೇಶ ಮಂದಿರದ ಬಳಿ ನಡೆದಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಇವೊಂದು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಕ್ಕಳನ್ನು ವಾಹನದಲ್ಲಿ ಕತೆದುಕೊಂಡು ಹೋಗುವಾಗ ಎಚ್ಚರಿಕೆಯಿಂದ ಇರಿ.
Kshetra Samachara
12/11/2021 09:14 am