ಧಾರವಾಡ: ಧಾರವಾಡ ತಾಲೂಕಿನ ಮುಗದ ಗ್ರಾಮ ಬಸ್ ನಿಲ್ದಾಣದ ಬಳಿಯ ಇದ್ದ ಕಿರಾಣಿ ಅಂಗಡಿಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ನಷ್ಟ ಉಂಟಾಗಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.
ಚನ್ನಬಸಪ್ಪ ಗುಡ್ಡೆಣ್ಣವರ ಎಂಬುವವರಿಗೆ ಸೇರಿದ ಅಂಗಡಿಯೇ ಬೆಂಕಿಗೆ ಆಹುತಿಯಾಗಿದೆ. ನಿನ್ನೆ ತಡರಾತ್ರಿ 1 ಗಂಟೆ ಸುಮಾರಿಗೆ ಅಂಗಡಿಗೆ ಬೆಂಕಿ ತಗುಲಿತ್ತು. ಇದರಿಂದ ಅಂಗಡಿಯಲ್ಲಿದ್ದ ಅಪಾರ ಪ್ರಮಾಣದ ಕಿರಾಣಿ ವಸ್ತುಗಳು, ಹಣ ಸೇರಿದಂತೆ ಇತ್ಯಾದಿ ವಸ್ತುಗಳು ಸುಟ್ಟು ಕರಕಲಾಗಿವೆ. ಸುಮಾರು 8 ರಿಂದ 10 ಲಕ್ಷ ರೂಪಾಯಿ ನಷ್ಟ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಬೆಂಕಿ ನಂದಿಸುವ ಕೆಲಸ ಮಾಡಿದರು.
Kshetra Samachara
29/10/2021 11:15 am