ನವಲಗುಂದ : ಶನಿವಾರ ಪಟ್ಟಣದ ಮಂಜುನಾಥ ನಗರದಲ್ಲಿ ಆಕಸ್ಮಿಕ ಬೆಂಕಿ ಅವಘಡಕ್ಕೆ ಮೇವು ಮತ್ತು ಹೊಟ್ಟಿನ ಬಣವಿ ಸಂಪೂರ್ಣ ನಾಶವಾಗಿದ್ದು, ರೈತ ತಲೆ ಮೇಲೆ ಕೈ ಹೊತ್ತು ಕುರುವಂತಾಗಿದೆ.
ಹೌದು ಇಂದು ಮಧ್ಯಾಹ್ನ ಮಂಜುನಾಥ ನಗರದ ಪಕ್ಕೀರಪ್ಪಾ ತಿಪ್ಪಣ್ಣ ನಿಂಬನ್ನವರ ಎಂಬುವವರಿಗೆ ಸೇರಿದ ಬಣವಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅವಘಡದಲ್ಲಿ ಎರಡು ಟ್ರಾಕ್ಟರ್ ಮೇವು ಮತ್ತು ಮೂರು ಟ್ರಾಕ್ಟರ್ ಹೊಟ್ಟು ಸಂಪೂರ್ಣ ನಾಶವಾಗಿದ್ದು, ಹೆಚ್ಚು ಕಡಿಮೆ 70 ರಿಂದ 80 ಸಾವಿರಗಳಷ್ಟು ನಷ್ಟವಾಗಿದೆ ಎಂದು ತಿಳಿದು ಬಂದಿದೆ. ಇನ್ನು ಘಟನೆ ನಡೆಯುತ್ತಿದ್ದಂತೆ ನರಗುಂದ ಅಗ್ನಿ ಶಾಮಕದಳ ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸುವ ಕೆಲಸ ಮಾಡಿದರು. ಇನ್ನು ಘಟನೆಯಿಂದ ರೈತ ಕಂಗಲಾಗಿದ್ದು, ಪರಿಹಾರಕ್ಕಾಗಿ ತಹಶೀಲ್ದಾರ್ ಗೆ ಮನವಿ ಮಾಡಿಕೊಂಡರು.
Kshetra Samachara
23/10/2021 05:18 pm