ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ :ತಹಶೀಲ್ದಾರ ಸಂಚರಿಸುತ್ತಿದ್ದ ಸರ್ಕಾರಿ ವಾಹನಕ್ಕೆ ಡಿಚ್ಚಿ ಹೊಡೆದ ಲಾರಿ

ಕುಂದಗೋಳ : ಪಟ್ಟಣದ ಬಸ್ ನಿಲ್ದಾಣದ ಬಳಿ ಸಂಚರಿಸುತ್ತಿದ್ದ ತಹಶೀಲ್ದಾರರ ಸರ್ಕಾರಿ ವಾಹನಕ್ಕೆ ಲಾರಿಯೊಂದು ಗುದ್ದಿದ ಪರಿಣಾಮ ತಹಶೀಲ್ದಾರ ವಾಹನದ ಹಿಂಭಾಗ ನುಜ್ಜಾದ ಘಟನೆ ಇಂದು ಸಾಯಂಕಾಲದ ಅವಧಿಯಲ್ಲಿ ನಡೆದಿದೆ.

ಹೌದು ! ಬಸ್ ನಿಲ್ದಾಣದ ಮಾರ್ಗ ಹಿಡಿದು ತಹಶೀಲ್ದಾರ ಕಚೇರಿಗೆ ಹೊರಟ ತಹಶೀಲ್ದಾರರ ವಾಹನಕ್ಕೆ ಹಿಂಬದಿಯಿಂದ ಬಂದ ಲಾರಿಯೊಂದು ಓವರ್ ಟೆಕ್ ಮಾಡುವಾಗ ತಹಶೀಲ್ದಾರ ವಾಹನಕ್ಕೆ ತಾಗಿಕೊಂಡು ಮುಂದೆ ಹೋಗಿದೆ. ಈ ಪರಿಣಾಮ ತಹಶೀಲ್ದಾರ ಸರ್ಕಾರಿ ವಾಹನದ ಹಿಂಭಾಗ ನುಜ್ಜಾಗಿದೆ.

ತಕ್ಷಣ ಸ್ಥಳಕ್ಕಾಗಮಿಸಿದ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣಾ ಅಧಿಕಾರಿಗಳು ಲಾರಿ ಹಾಗೂ ತಹಶೀಲ್ದಾರ ವಾಹನವನ್ನು ಠಾಣೆಗೆ ತಂದು ವಿಚಾರಣೆ ನಡೆಸಿದಾಗ ಲಾರಿ ಚಾಲಕ ತಪ್ಪೋಪ್ಪಿಕೊಂಡು ವಾಹನದ ನುಜ್ಜಾದ ಭಾಗವನ್ನು ರಿಪೇರಿ ಮಾಡಿಕೊಡುವ ಜವಾಬ್ದಾರಿ ವಹಿಸಿಕೊಂಡ ಬಳಿಕ ಪ್ರಕರಣ ಅಂತ್ಯ ಕಂಡಿದೆ.

Edited By : Nagesh Gaonkar
Kshetra Samachara

Kshetra Samachara

21/10/2021 10:04 pm

Cinque Terre

73.42 K

Cinque Terre

2

ಸಂಬಂಧಿತ ಸುದ್ದಿ