ಹುಬ್ಬಳ್ಳಿ:ನಗರದ ಗೋಕುಲ ಗ್ರಾಮದ ಧಾರಾವತಿ ಆಂಜನೇಯ ದೇವಸ್ಥಾನದ ಬಳಿ ಬೈಪಾಸ್‌ನಲ್ಲಿ ಶನಿವಾರ ಸಂಜೆ ಲಾರಿ- ಕಾರು ನಡುವೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ.
ಈ ಮೂಲಕ ಮೃತರ ಸಂಖ್ಯೆ ಎರಡಕ್ಕೇರಿದೆ. ಬೆಳಗಾವಿ ಜಿಲ್ಲೆ ಬೆಲ್ಲದ ಬಾಗೇವಾಡಿ ಮೂಲದ ಪೃಥ್ವಿರಾಜ ತೇಲಿ ( 13 ) ಮೃತಪಟ್ಟ ಬಾಲಕ. ಲಾರಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಆನಂದ ಶ್ರೀಖಂಡೆ ಸ್ಥಳದಲ್ಲೇ ಮೃತಪಟ್ಟಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಪೃಥ್ವಿರಾಜನ್ನು ಕಿಮ್ಸ್‌ಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ತಡರಾತ್ರಿ ಮೃತಪಟ್ಟಿರುವುದಾಗಿ ಉತ್ತರ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.
Kshetra Samachara
11/10/2021 10:10 am