ಧಾರವಾಡ: ಲಾರಿಯೊಂದರ ಎಕ್ಸಲ್ ಕಟ್ ಆಗಿ ಚಕ್ರ ಬೇರ್ಪಟ್ಟ ಪರಿಣಾಮ ಲಾರಿ ಕಾರಿಗೆ ಗುದ್ದಿ ಹೊಸ ಬಸ್ ನಿಲ್ದಾಣದತ್ತ ನುಗ್ಗಿದ ಘಟನೆ ನಡೆದಿದ್ದು, ಇದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಹುಬ್ಬಳ್ಳಿ ಕಡೆಯಿಂದ ಖಾಲಿ ಸಿಲಿಂಡರ್‌ಗಳನ್ನು ಹೊತ್ತೊಯ್ಯುತ್ತಿದ್ದ ಲಾರಿ ಧಾರವಾಡದ ಹೊಸ ಬಸ್ ನಿಲ್ದಾಣದ ಬಳಿ ಬರುತ್ತಿದ್ದಂತೆ ಮುಂದಿನ ಚಕ್ರದ ಎಕ್ಸಲ್ ಕಟ್ ಆಗಿ ಚಕ್ರ ಬೇರ್ಪಟ್ಟಿದೆ. ಆ ಚಕ್ರ ಸ್ಕೂಟಿ ಮೇಲೆ ಹೊರಟಿದ್ದ ಇಬ್ಬರು ಯುವಕರಿಗೆ ಡಿಕ್ಕಿ ಹೊಡೆದಿದ್ದು, ಅವರು ಗಾಯಗೊಂಡಿದ್ದಾರೆ. ಇದರಿಂದ ನಿಯಂತ್ರಣ ತಪ್ಪಿದ ಲಾರಿ, ಡಿವೈಡರ್‌ಗೆ ಡಿಕ್ಕಿ ಹೊಡೆದ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಅಲ್ಲದೇ ಹೊಸ ಬಸ್ ನಿಲ್ದಾಣದ ಫುಟಪಾತ್ ಮೇಲೆ ಹತ್ತಿ ನಿಂತಿದೆ.
ಲಾರಿಯ ಹೊಡೆತಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Kshetra Samachara
09/10/2021 06:55 pm