ಧಾರವಾಡ: ಕಾರಿನಲ್ಲಿ ಮಕ್ಕಳನ್ನು ಬಿಟ್ಟು ತಂದೆ ಚಿಕನ್ ತರಲೆಂದು ಹೋದ ಸಂದರ್ಭದಲ್ಲಿ ಬಾಲಕ ಕಾರಿನ ಹ್ಯಾಂಡ್ ಬ್ರೆಕ್ ತೆಗೆದ ಪರಿಣಾಮ ಇಳಿ ಜಾರಿನಲ್ಲಿದ್ದ ಕಾರು ಮುಂದೆ ಸಾಗಿ ಎರಡ್ಮೂರು ಬೈಕ್‌ಗೆ ಡಿಕ್ಕಿಪಡಿಸಿರುವ ಘಟನೆ ಧಾರವಾಡದ ತೇಜಸ್ವಿನಗರದಲ್ಲಿ ನಡೆದಿದೆ.
ಇಳಿಜಾರಿನಲ್ಲಿದ್ದ ಕಾರು ಅದೃಷ್ಟವಶಾತ್ ಬೈಕ್‌ಗೆ ಡಿಕ್ಕಿ ಹೊಡೆದು ನಿಂತಿದೆ. ಒಂದು ವೇಳೆ ಬೈಕ್ ಇರದೇ ಹೋಗಿದ್ದರೆ ಅನಾಹುತ ಸಂಭವಿಸುತ್ತಿತ್ತು. ಕೂಡಲೇ ಸ್ಥಳೀಯರು ಕಾರಿನಲ್ಲಿದ್ದ ಮಕ್ಕಳನ್ನು ಹೊರತೆಗೆದಿದ್ದಾರೆ.
Kshetra Samachara
28/09/2021 07:21 pm