ಹುಬ್ಬಳ್ಳಿ- ಯುವಕನೊಬ್ಬ ಬೈಕ್ ಚಲಿಸುತ್ತಿರುವಾಗ ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ಕಾರವಾರ ರಸ್ತೆಯ ಬ್ರಿಡ್ಜ್ ಬಳಿ ನಡೆದಿದೆ.
ಹೌದು,,,, ಯುವಕ ಬೈಕ್ ಸವಾರಿ ಮಾಡುತ್ತಿರುವ ವೇಳೆಯಲ್ಲಿ ರಸ್ತೆ ಹದಗೆಟ್ಟ ಕಾರಣ, ಈ ಘಟನೆ ನಡೆದಿದೆ ಎಂದು ಸ್ಥಳದಲ್ಲೆ ಇದ್ದವರು ಹೇಳುತ್ತಿದ್ದಾರೆ. ಸಾವನ್ನಪ್ಪಿದ ಯುವಕ ಇನ್ನು ಯಾರು ಎಂದು ತಿಳಿದು ಬಂದಿಲ್ಲ. ಈ ಘಟನೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.
Kshetra Samachara
26/09/2021 09:27 pm