ಹುಬ್ಬಳ್ಳಿ- ನೀರಿನ ಟ್ಯಾಂಕ್ ತುಂಬಿಕೊಂಡು ಹೋಗುತ್ತಿದ್ದ, ಟ್ರಾಕ್ಟರ್ ವೊಂದು ಚಾಲಕನ ನಿಯಂತ್ರಣ ತಪ್ಪಿ, ಪಲ್ಟಿಯಾದ ಘಟನೆ ಹುಬ್ಬಳ್ಳಿ ತಾಲೂಕು ಸುಳ್ಳದ ರಸ್ತೆಯಲ್ಲಿ ನಡೆದಿದೆ.
ಹೌದು,, ಬ್ಯಾಹಟ್ಟಿ ಗ್ರಾಮದ ಟ್ಯಾಕ್ಟರ್ ಇದಾಗಿದ್ದು, ಇಂದು ಹುಬ್ಬಳ್ಳಿಯಿಂದ ಬ್ಯಾಹಟ್ಟಿ ಗ್ರಾಮಕ್ಕೆ ನೀರು ತುಂಬಿಸಿಕೊಂಡು ಬರುವ ಸಂದರ್ಭದಲ್ಲಿ, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ, ಇನ್ನು ಟ್ರಾಕ್ಟರ್ ಪಲ್ಟಿಯಾದ ಪರಿಣಾಮ ಡ್ರೈವರ್ ಗೆ ಗಂಭೀರವಾದ ಗಾಯವಾಗಿದೆ.
Kshetra Samachara
12/09/2021 04:31 pm