ಹುಬ್ಬಳ್ಳಿ: ಬೆಂಗಳೂರಿನ ಕೋರಮಂಗಲ ರಸ್ತೆಯಲ್ಲಿ ನಡೆದ ಅಪಘಾತ ಪ್ರಕರಣದಲ್ಲಿ ಸಾವನಪ್ಪಿದ್ದ
ಹುಬ್ಬಳ್ಳಿಯ ರೋಹಿತ ಲದ್ವಾ ಮನೆಯಲ್ಲಿ ಆಕ್ರಂದನ ಮುಗಿಲುಮುಟ್ಟಿದೆ.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರೋಹಿತ ಲದ್ವಾ ಬಾಲ್ಯದಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡಿದ್ದ. ಚಿಕ್ಕಪ್ಪ ದಶರಥ ಮತ್ತು ಚಿಕ್ಕಮ್ಮ ದಿವ್ಯಾ ಬೆಳಸಿದ್ದ ರೋಹಿತ್ ಕಳೆದ ಒಂದೂವರೆ ವರ್ಷದಿಂದ ಬೆಂಗಳೂರಿನಲ್ಲಿ ವಾಸವಿದ್ದ. ಪಿಯುಸಿ ವರೆಗೆ ವಿದ್ಯಾಭ್ಯಾಸ ಮಾಡಿದ್ದ ರೋಹಿತ ಅಪಘಾತದಲ್ಲಿ ಸಾವನಪ್ಪಿದ್ದ ಸುದ್ದಿ ತಿಳಿಯುತ್ತಿದ್ದಂತೆ ಅವರ ಸಂಬಂಧಿಕರ ಮನೆಯಲ್ಲಿ ಆಕ್ರಂದನ ಮುಗಿಲುಮುಟ್ಟಿದೆ.
ಇನ್ನೂ ರೋಹಿತ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸಹೋದರ ಆಕಾಶ ಹಾಗೂ ಅವರ ಚಿಕ್ಕಪ್ಪ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.
Kshetra Samachara
31/08/2021 10:38 pm