ಧಾರವಾಡ: ಫುಟ್‌ಪಾತ್ ಡಿವೈಡರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಧಾರವಾಡದ ಮಾಡರ್ನ್ ಹಾಲ್ ಬಳಿ ನಿನ್ನೆ ತಡರಾತ್ರಿ ನಡೆದಿದೆ.
ವಿಜಯಪುರ ಜಿಲ್ಲೆ ಮೂಲದ ಮಹೇಶ ಎಂಬುವವರೇ ಈ ಘಟನೆಯಲ್ಲಿ ಅಸುನೀಗಿದವರು. ಐಎಎಸ್ ಕೋಚಿಂಗ್‌ಗೆ ಎಂದು ಧಾರವಾಡಕ್ಕೆ ಬಂದಿದ್ದ ಇವರು, ದಾನೇಶ್ವರನಗರದಲ್ಲಿ ರೂಮ್ ಮಾಡಿಕೊಂಡು ನೆಲೆಸಿದ್ದರು. ನಿನ್ನೆ ತಡರಾತ್ರಿ ರೂಮ್‌ಗೆ ತೆರಳುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಸ್ಥಳಕ್ಕೆ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿದ್ದರು.
Kshetra Samachara
19/08/2021 08:37 am