ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅಶ್ವಗಳ ಅಸಹಜ ಸಾವು

ಧಾರವಾಡ: ಧಾರವಾಡದ ಕೃಷಿ ವಿಶ್ವವಿದ್ಯಾಲಯದ ರಸ್ತೆಯಲ್ಲಿರುವ ಪೆಪ್ಸಿ ಕಂಪೆನಿ ಹತ್ತಿರ ಮೂರು ಕುದುರೆಗಳು ಅಸಹಜವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ದಷ್ಟಪುಷ್ಟವಾಗಿರುವ ಮೂರು ಕುದುರೆಗಳು ಏನನ್ನೋ ತಿಂದು ಸಾವನ್ನಪ್ಪಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಅಪಘಾತವಾಗಿದ್ದರೆ, ಕುದುರೆಗಳಿಗೆ ಪೆಟ್ಟಾಗಬೇಕಿತ್ತು. ಆದರೆ, ಕುದುರೆಗಳಿಗೆ ಎಲ್ಲೂ ಪೆಟ್ಟಾಗಿಲ್ಲ.

ಈ ಅಶ್ವಗಳು ವಿಷಕಾರಿ ಪದಾರ್ಥ ತಿಂದು ಸಾವನ್ನಪ್ಪಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಒಂದೇ ಕಡೆ ಮೂರು ಕುದುರೆಗಳು ಸಾವನ್ನಪ್ಪಿ ಬಿದ್ದಿರುವುದನ್ನು ಕಂಡು ದಾರಿ ಹೋಕರು ಮರುಕ ವ್ಯಕ್ತಪಡಿಸುತ್ತಿದ್ದಾರೆ.

Edited By : Shivu K
Kshetra Samachara

Kshetra Samachara

11/08/2021 11:55 am

Cinque Terre

55.48 K

Cinque Terre

1

ಸಂಬಂಧಿತ ಸುದ್ದಿ