ಕುಂದಗೋಳ : ಸಂಶಿ ಗ್ರಾಮದಿಂದ ಶೇಂಗಾ ತುಂಬಿಕೊಂಡು ಕುಂದಗೋಳ ಪಟ್ಟಣದ ಎಡೆಗೆ ತೆರಳುತ್ತಿದ್ದ ರೈತರೊಬ್ಬರ ಟ್ರ್ಯಾಕ್ಟರ್' ಟಿಲ್ಲರ್'ವೊಂದು ರಸ್ತೆ ತಗ್ಗಿಗೆ ಸಿಲುಕಿ ವಿದ್ಯುತ್ ಕಂಬದ ಮೇಲೆಯೆ ವಾಲಿದ ಘಟನೆ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಸಿದ್ದೇಶ್ವರ ದೇವಸ್ಥಾನದ ಬಳಿ ಶನಿವಾರ ಸಾಯಂಕಾಲದ ಅವಧಿಯಲ್ಲಿ ನಡೆದಿದೆ.
ಟ್ರ್ಯಾಕ್ಟರ್ ವಾಲಿದ ತಕ್ಷಣವೇ ಟ್ರ್ಯಾಕ್ಟರ್'ನಲ್ಲಿದ್ದ ರೈತ ಸುರೇಶ್ ಕೌಜಗೇರಿ ಹಾಗೂ ಚಾಲಕ ಜಿಗಿದು ಅಪಾಯದಿಂದ ಪಾರಾಗಿದ್ದು, ಟ್ರ್ಯಾಕ್ಟರ್ ವಾಲಿದ ರಭಸಕ್ಕೆ ರಸ್ತೆ ಪಕ್ಕದ ವಿದ್ಯುತ್ ಕಂಬ ಜಖಂಗೊಂಡಿದೆ, ತಕ್ಷಣ ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಜೆಸಿಬಿ ಮೂಲಕ ಟ್ರ್ಯಾಕ್ಟರ್ ಟಿಲ್ಲರ್ ತೆರವು ಗೊಳಿಸಿದರು.
Kshetra Samachara
01/08/2021 08:51 am