ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ತಪ್ಪಿತು ಅನಾಹುತ, ಮುರಿದು ಹೋಯ್ತು ರೈಲ್ವೆ ಗೇಟ್ !

ಕುಂದಗೋಳ : ಪಟ್ಟಣದ ರೈಲ್ವೆ ಟ್ರ್ಯಾಕ್ ಬಳಿ ಸಂಭವಿಸಬಹುದಾದ ಅಪಘಾತವೊಂದು ಅದೃಷ್ಟವಶಾತ್ ತಪ್ಪಿದ್ದು ಜೋಡೆತ್ತು ಚಕ್ಕಡಿ ಸವಾರ ಅಪಾಯದಿಂದ ಪಾರಾಗಿದ್ದಾರೆ.

ಹೌದು ! ಇಂದು ಸಾಯಂಕಾಲ ರೈಲ್ವೆ ಬರುವ ಸಮಯಕ್ಕೆ ರೈಲ್ವೆ ಸಿಬ್ಬಂದಿ ಗೇಟ್ ಕ್ಲೋಸ್ ಮಾಡಿ ಮರಳಿ ತೆರೆಯುವ ಸಮಯಕ್ಕೆ ಅವಸರದಿಂದ ಎತ್ತುಗಳು ಓಡಿದ ಪರಿಣಾಮ ರೈಲ್ವೆ ಗೇಟ್ ಮುರಿದು ಬಿದ್ದಿದೆ. ತಕ್ಷಣ ರೈಲ್ವೆ ಸಿಬ್ಬಂದಿ ಹಾಗೂ ಸ್ಥಳೀಯರು ಚಕ್ಕಡಿ ಎತ್ತು ಬೇರ್ಪಡಿಸಿ ಕಳುಹಿಸಿ ಮುರಿದು ಹೋದ ಗೇಟ್ ಪಕ್ಕಕ್ಕಿಟ್ಟು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಕಳೆದೊಂದು ವರ್ಷದಿಂದ ಮಸಾರಿ ಪ್ಲಾಟ್ ರೈಲ್ವೆ ಬ್ರಿಡ್ಜ್ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ಎಲ್ಲ ರೈತಾಪಿ ವಾಹನ ಚಕ್ಕಡಿ ವಾಣಿಜ್ಯ ವಾಹನ ಸಾರಿಗೆ ಬಸ್ಸ್ ಒಂದೇಡೆ ಗೇಟ್'ನಲ್ಲೇ ಸಂಚಾರ ಮಾಡುತ್ತಿದ್ದು ಪದೇ ಪದೇ ಇಂತಹ ಸಮಸ್ಯೆ ಎದುರಾಗುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

Edited By : Nagesh Gaonkar
Kshetra Samachara

Kshetra Samachara

29/07/2021 09:09 pm

Cinque Terre

72.43 K

Cinque Terre

1

ಸಂಬಂಧಿತ ಸುದ್ದಿ