ಕುಂದಗೋಳ : ಎರೆಡು ದಿನಗಳ ಬಳಿಕ ಕೆರೆಯಲ್ಲಿ ಮುಳುಗಿದ ವ್ಯಕ್ತಿ ಶವ ಪತ್ತೆ

ಕುಂದಗೋಳ : ಕಳೆದ ಮಂಗಳವಾರ ಮಧ್ಯಾಹ್ನದ ಅವಧಿಯಲ್ಲಿ ಮೀನು ಹಿಡಿಯಲೇಂದು ಹೋಗಿ ಕಮಡೊಳ್ಳಿ ಗ್ರಾಮದ ಬತ್ತಗೇರಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ 35 ವರ್ಷದ ಧರ್ಮಣ್ಣ ಶಂಕ್ರಪ್ಪ ಬಾರಕೇರ ಶವ ಎರೆಡು ದಿನಗಳ ಬಳಿಕ ತಾನಾಗಿಯೇ ಮೇಲೆದಿದೆ.
ಆಳವಾದ ಬತ್ತಗೇರಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ವ್ಯಕ್ತಿಯ ಶವದ ಹುಡುಕಾಟಕ್ಕೆ ಸತತ ಎರೆಡು ದಿನಗಳ ಕಾಲ ವಿಧ ವಿಧದ ಪ್ರಯೋಗ ಮಾಡಿದ ಅಗ್ನಿಶಾಮಕ ದಳದ ಠಾಣಾಧಿಕಾರಿ ಗೋವಿಂದಪ್ಪ ಟಿ ನೇತೃತ್ವದ ತಂಡಕ್ಕೆ ಶವ ಸಿಕ್ಕಿರಲಿಲ್ಲ.
ಇಂದು ಬೆಳಿಗ್ಗೆ ಮತ್ತೇ ಕಾರ್ಯಾಚರಣೆಗೆಂದು ಅಗ್ನಿಶಾಮಕ ದಳದ ಠಾಣಾಧಿಕಾರಿ ಬತ್ತಗೇರಿ ಕೆರೆಗೆ ಬಂದಾಗ ಶವ ಕಾಣಿಸಿಕೊಂಡಿದೆ.
ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Kshetra Samachara

Kshetra Samachara

10 days ago

Cinque Terre

46.96 K

Cinque Terre

0