ಹುಬ್ಬಳ್ಳಿ- ಬೈಕ್ ಸ್ಕಿಡ್ ಆಗಿ ಬಿದ್ದು ಬೈಕ್ ಸವಾರನೊಬ್ಬ ಗಂಭೀರ ಗಾಯಗೊಂಡಿರುವ ಘಟನೆ ಹುಬ್ಬಳ್ಳಿ ಕೇಶ್ವಾಪೂರ ಬಳಿ ನಡೆದಿದೆ.
ಬೈಕ್ ಸವಾರ ಕಾರ್ ಓವರ್ ಟೆಕ್ ಮಾಡಲು ಹೋಗಿ, ಡಿವೈಡರ್ ಗೆ ಬೈಕ್ ತಗುಲಿದ ಪರಿಣಾಮ, ಸವಾರ ರಸ್ತೆ ಮಧ್ಯೆ ಬಿದ್ದಿದ್ದಾನೆ. ಇನ್ನು ಘಟನೆಯಲ್ಲಿ ಬೈಕ್ ಸವಾರನಿಗೆ ಎದೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ, ಸ್ಥಳಕ್ಕೆ ಬಂದ ಟ್ರಾಫಿಕ್ ಪೊಲೀಸ ಸಿಬ್ಬಂದಿ ಆಟೋ ಮುಖಾಂತರ ಆತನನ್ನು ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಬೈಕ್ ಸವಾರ ನಗರ ರಾಯಲ್ ಎನ್ಪಿಲ್ಡ್ ಪಕ್ಕ ಚಿಕನ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ...
Kshetra Samachara
22/02/2021 09:28 pm