ಕಾರ್ ಹಾಗೂ ಲಾರಿ ನಡುವೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮೂವರಿಗೆ ಗಾಯವಾಗಿರುವ ಘಟನೆ ಗದಗ ತಾಲೂಕಿನ ಹುಲಕೋಟಿ ರೂರಲ್ ಇಂಜನಿಯರಿಂಗ್ ಕಾಲೇಜ್ ಬಳಿ ನಡೆದಿದೆ.
ಕಾರ್ ಚಾಲಕ ಅನ್ವರ್ ಹಾಗೂ ಪ್ರೇಮಾ ಈಶ್ವರಗೌಡ ಪಾಟೀಲ್(55) ಮೃತ ದುರ್ದೈವಿಗಳು. ಈಶ್ವರಗೌಡ ರುದ್ರಗೌಡ ಪಾಟೀಲ್, ಶಿವಾಬಾಯಿ ಮೇಲಗಿರಿಗೌಡ ಪಾಟೀಲ್, ಮಹಾರಾಜಗೌಡ ಮೇಲಗಿರಿಗೌಡ ಪಾಟೀಲ್ ಗಾಯಾಗೊಂಡಿದ್ದು, ಗಾಯಾಳುಗಳಿಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೂಲತಃ ಗದಗ ಜಿಲ್ಲೆ ರೋಣ ತಾಲೂಕಿನ ಮಾಳವಾಡ ಗ್ರಾಮದವರಾಗಿದ್ದು,ಪ್ರಸ್ತುತ ಧಾರವಾಡದಲ್ಲಿ ನೆಲೆಸಿದ್ದರು ಎಂದು ತಿಳಿದುಬಂದಿದೆ. ಮಾಳವಾಡ ಗ್ರಾಮದ ತಮ್ಮ ಹೊಲಕ್ಕೆ ಭೇಟಿ ನೀಡಿ ವಾಪಾಸ್ ತೆರಳುವಾಗ ನಡೆದ ದುರ್ಘಟನೆ ನಡೆದಿದ್ದು,ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
17/02/2021 07:45 pm