ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಬಿದಿರಿಗೆ ಬೆಂಕಿ: ತಪ್ಪಿದ ಅನಾಹುತ

ಧಾರವಾಡ: ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಕ್ರಾಸ್ ಬಳಿ ಇರುವ ಪೊಲೀಸ್ ಇಲಾಖೆಗೆ ಸೇರಿದ ಜಾಗದಲ್ಲಿದ್ದ ಬಿದಿರಿಗೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹತ್ತಿದ ಘಟನೆ ನಡೆದಿದೆ.

ಪೊಲೀಸ್ ಇಲಾಖೆಗೆ ಜಾಗದಲ್ಲಿ ಬಿದಿರು ದೊಡ್ಡ ಪ್ರಮಾಣದಲ್ಲಿ ಬೆಳೆದಿತ್ತು. ಯಾರೋ ಕಿಡಿಗೇಡಿಗಳು ಇದಕ್ಕೆ ಬೆಂಕಿ ಇಟ್ಟಿದ್ದರಿಂದ ಬೆಂಕಿಯ ಕೆನ್ನಾಲಿಗೆ ಚಾಚಿದೆ. ಸುತ್ತ ಮುತ್ತ ಮನೆಗಳಿದ್ದು, ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಇದನ್ನು ನೋಡಿದ ರಾಬರ್ಟ್ ರಫೀಲ್ ಎನ್ನುವವರು ಅಗ್ನಿ ಶಾಮಕ ದಳದವರಿಗೆ ಮಾಹಿತಿ ಮುಟ್ಟಿಸಿದ್ದರಿಂದ ಸ್ಥಳಕ್ಕೆ ಬಂದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Edited By : Manjunath H D
Kshetra Samachara

Kshetra Samachara

16/02/2021 09:49 pm

Cinque Terre

64.26 K

Cinque Terre

1

ಸಂಬಂಧಿತ ಸುದ್ದಿ