ಲಕ್ಷ್ಮೇಶ್ವರ: ಟಾಟಾ ಏಸ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಐದು ಜನರಿಗೆ ಗಂಭೀರ ಗಾಯವಾಗಿರುವ ಘಟನೆ ಲಕ್ಷ್ಮೇಶ್ವರ ತಾಲ್ಲೂಕಿನ ಅಕ್ಕಿಗುಂದ ಗ್ರಾಮದ ಹತ್ತಿರ ನಡೆದಿದೆ.
ಅಕ್ಕಿಗುಂದದಿಂದ ಲಕ್ಷ್ಮೇಶ್ವರ ಕಡೆಗೆ ಹೊಗುತ್ತಿದ್ದ ಟಾಟಾ ಎಸಿ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದ್ದು, ರೂಪ್ಲಪ್ಪ ವಾಚಪ್ಪ ಲಮಾಣಿ (65) ವ್ಯಕ್ತಿ ಸಾವನ್ನಪ್ಪಿದ್ದು, 5 ಮಹಿಳೆಯರು ಗಾಯಗೊಂಡಿದ್ದಾರೆ. ಗಾಯಾಳಾಗಳನ್ನು ಗದಗ ಜಿಮ್ಸ್ ಗೆ ದಾಖಲಿಸಲಾಗಿದೆ.
ಗಂಭೀರ ಗಾಯಗೊಂಡವರಲ್ಲಿ ಗಂಗವ್ವ ಲಮಾಣಿ, ಲಕ್ಷ್ಮವ್ವ ಲಮಾಣಿ, ಶಾಂತವ್ವ ಲಮಾಣಿ, ಸಾವಿತ್ರಮ್ಮ ಲಮಾಣಿ, ರೇಖವ್ವ ಲಮಾಣಿ ಎನ್ನಲಾಗಿದೆ.ಈ ಕುರಿತು ಲಕ್ಷ್ಮೇಶ್ವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
12/02/2021 09:24 pm