ಧಾರವಾಡ: ಧಾರವಾಡದ ಬಾರಾಕೊಟ್ರಿ ಬಳಿ ನಿಂತಿದ್ದ ನೀರಿನ ಟ್ಯಾಂಕರ್ ಗೆ ಬೈಕ್ ಡಿಕ್ಕಿಪಡಿಸಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆಗೆ ಸ್ಪಂದಿಸದೇ ಇಂದು ಅಸುನೀಗಿದ್ದಾನೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಮಲ್ಲಾಪುರ ಗ್ರಾಮದ ಮೇಘರಾಜ ಭೂಮನಗೌಡರ (30) ಎಂಬ ಯುವಕ ಮೊನ್ನೆಯಷ್ಟೇ ಬಾರಾಕೊಟ್ರಿ ಬಳಿ ನಿಂತಿದ್ದ ನೀರಿನ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದ್ದ. ಇದರಿಂದ ಆತನ ತಲೆಗೆ ಗಂಭೀರವಾದ ಗಾಯವಾಗಿತ್ತು.
ಗಾಯಾಳುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಮೇಘರಾಜ ಇಂದು ಅಸುನೀಗಿದ್ದಾನೆ. ಈ ಸಂಬಂಧ ಧಾರವಾಡದ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.
Kshetra Samachara
12/02/2021 03:48 pm