ಹುಬ್ಬಳ್ಳಿ: ಗೆಳೆಯರೊಂದಿಗೆ ಕಾರವಾರ ಮತ್ತು ಗೋವಾ ಪ್ರವಾಸಕ್ಕೆ ಹೊರಟಿದ್ದ ಸಮಯದಲ್ಲಿ, ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕಿಮ್ಸ್ ನ ವೈದ್ಯ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಫೆಬ್ರವರಿ 2 ರಂದು ಯಲ್ಲಪೂರ ಬಳಿ, ಗೂಡ್ಸ್ ವಾಹನ ಮತ್ತು ಕಾರು ನಡುವೆ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಡಾ.ಪೂಜಾ ಭಟ್ ನಿನ್ನೆ ಚಿಕಿತ್ಸೆ ಫಲಿಸದೆ ಸಾವಿಗೀಡಾದರು. ವೈದ್ಯ ವಿದ್ಯಾರ್ಥಿನಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ಪಾರ್ಥಿವ ಶರೀರವನ್ನು ಹುಬ್ಬಳ್ಳಿ ಕಿಮ್ಸ್ ಮುಂಭಾಗದಲ್ಲಿಟ್ಟು, ಮಹಾವಿದ್ಯಾಲಯದ ನೂರಾರೂ ವಿದ್ಯಾರ್ಥಿಗಳು, ಉಪನ್ಯಾಸಕರು ಎಲ್ಲರು ಸೇರಿ ಅಂತಿಮ ನಮನ ಸಲ್ಲಿಸಿದರು. ಎಲ್ಲರೊಂದಿಗೆ ಲವಲವಿಕೆಯಿಂದ ಇದ್ದ ಡಾ.ಪೂಜಾ, ಇನ್ನಿಲ್ಲ ಎನ್ನುವುದನ್ನು ಅರಗಿಸಿಕೊಳ್ಳಲಾಗದ ಹಲವರು, ಅಲ್ಲಿಯೇ ಕಣ್ಣೀರಾದರು. ಡಾ.ಪೂಜಾ ಭಟ್ ಸಾವು, ಕಿಮ್ಸ್ ನಲ್ಲಿ ನೀರವ ಮೌನವನ್ನ ಮೂಡಿಸಿತ್ತು...
Kshetra Samachara
11/02/2021 02:33 pm