ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಕೆರೆಯಲ್ಲಿ‌ ಮುಳುಗಿ ಬಾಲಕ ಸಾವು

ಕಲಘಟಗಿ : ತಾಲೂಕಿನ ಹಾರುಗೇರಿ ಗ್ರಾಮದಲ್ಲಿ ದೊಡ್ಡ ಕೆರೆಯಲ್ಲಿ ಬಾಲಕ ಈಜಲು ಹೋಗಿ ಮುಳುಗಿ ಸಾವನ್ನಪ್ಪಿದ ಘಟನೆ ಭಾನುವಾರ ಸಂಭವಿಸಿದೆ.

ಗ್ರಾಮದ ಶ್ರೀಕಾಂತ ಬಸವರಾಜ ಮುರಳ್ಳಿ (14) ಮೃತಪಟ್ಟ ಬಾಲಕನಾಗಿದ್ದಾನೆ.ಈತ ಶನಿವಾರ ಮನೆಯಿಂದ ತೆರಳಿದ್ದು,ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.ಕೆರೆಯಲ್ಲಿ ಈಜು ಕಲಿಯಲು ಹೋಗಿದ್ದ ಎನ್ನಲಾಗಿದೆ.ಕೆರೆಯ ಸುತ್ತ ತಡೆಗೋಡೆ ನಿರ್ಮಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು.

ಅಗ್ನಿಶಾಮಕ ಅಧಿಕಾರಿ ಎ ವಿ ಮಾನೆ,ಎ ಸಿ ಮುದ್ದಿನವರ,ವಿ ಎಸ್ ತಂಬದ,ಹನುಮಂತ ರಜಪೂತ,ಆನಂದ ಗೊಡ್ಗೆ ಅವರು ಸತತ ಕಾರ್ಯಾಚರಣೆ ಮಾಡಿ ಬಾಲಕನ ಮೃತದೇಹ ಪತ್ತೆ ಮಾಡಿದ್ದಾರೆ.

Edited By : Manjunath H D
Kshetra Samachara

Kshetra Samachara

24/01/2021 04:19 pm

Cinque Terre

68.08 K

Cinque Terre

0

ಸಂಬಂಧಿತ ಸುದ್ದಿ