ಹುಬ್ಬಳ್ಳಿ; ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಿರೇಸೂರು ಬ್ರಿಡ್ಜ್ ಬಳಿ ಕಾಲುವೆ ಪಾಲಾಗಿದ್ದ ಮೂವರು ಯುವಕರ ಪೈಕಿ ಇಬ್ಬರ ಶವಗಳು ಇಂದು ಬೆಳಗ್ಗೆ ಪತ್ತೆಯಾಗಿದ್ದು, ಇನ್ನೋರ್ವನ ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.
ಸನ್ನಿ ಜಾನ್ಸನ್ ಕಲ್ಲಕುಂಟ್ಲ, ಗಜಾನನ ರಾಜಶೇಖರ್ ಶವ ಪತ್ತೆಯಾಗಿದ್ದು,ಇನ್ನೋರ್ವನಿಗಾಗಿ ಮುಂದುವರೆದ ಶೋಧಕಾರ್ಯ ಮುಂದುವರೆದಿದ್ದು, ನಿನ್ನೆ ತಡರಾತ್ರಿಯಿಂದಲೂ ಪೊಲೀಸರು ಹಾಗೂ ಅಗ್ನಿಶಾಮಕ ದಳದ ತಂಡದಿಂದ ಶೋಧಕಾರ್ಯ ನಡೆಸಿದ್ದು ಬೆಳಗ್ಗೆ ಅಣ್ಣಿಗೇರಿಯ ಬಸಾಪುರ ಕಾಲುವೆ ಗೇಟ್ ಬಳಿ ಇಬ್ಬರ ಶವ ಪತ್ತೆಯಾಗಿವೆ.
ನಿನ್ನೆ ಫೋಟೋ ಶೂಟ್ ಗಾಗಿ ಐವರು ತೆರಳಿದ್ದರು. ಆಗ ಜೇನು ನೋಣಗಳು ದಾಳಿ ಮಾಡಿದಾಗ ಐವರು ಕಾಲುವೆಗೆ ಹಾರಿದ್ದರು. ಅದರಲ್ಲಿ ಓರ್ವ ಯುವತಿ ಹಾಗೂ ಒಬ್ಬ ಯುವಕನನ್ನು ಕುರಿಗಾಯಿಗಳು ರಕ್ಷಣೆ ಮಾಡಿದ್ದರು. ಮೂವರ ನಾಪತ್ತೆಯಾಗಿದ್ದರು. ಅದರಲ್ಲಿ ಮೂವರಲ್ಲಿ ಇಬ್ಬರ ಶವ ದೊರೆತ್ತಿದ್ದು,ಇನ್ನೋರ್ವನ ಶವಕ್ಕೆ ಶೋಧ ನಡೆಯುತ್ತಿದೆ. ಸ್ಥಳದಲ್ಲಿ ಅಗ್ನಿ ಶಾಮಕ ಹಾಗೂ ಪೊಲೀಸ್ ಸಿಬ್ಬಂದಿ ಮೊಕ್ಕಾಂ ಹೂಡಿದ್ದು ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ.
Kshetra Samachara
23/01/2021 09:31 am