ಹುಬ್ಬಳ್ಳಿ: ಸೆಲ್ಫಿ ಗೀಳಿಗೆ ಮೂವರು ಯುವಕರು ಕಾಲುವೆ ನೀರು ಪಾಲಾದ ಘಟನೆ ಹುಬ್ಬಳ್ಳಿ ತಾಲೂಕಿನ ಕಿರೇಸೂರು ಬ್ರಿಡ್ಜ್ ಬಳಿ ಘಟನೆ ನಡೆದಿದೆ.
ಬ್ರೀಡ್ಜ ಬಳಿ ಫೋಟೋ ಶೂಟ್ ಗೆಂದು ನಾಲ್ವರು ಯುವಕರು, ಓರ್ವ ಯುವತಿ ತೆರಳಿದ್ದರು. ಆದ್ರೆ ಫೋಟೋಶೂಟ ವೇಳೆ ಜೇನು ನೋಣಗಳು ಎದ್ದ ಪರಿಣಾಮ ಭಯಗೊಂಡು ಕಾಲುವೆಗೆ ಹಾರಿದ್ದಾರೆ ಎನ್ನಲಾಗಿದೆ.
ಐವರ ಫೈಕಿ ಮೂವರು ಕಾಲುವೆ ನೀರಿನಲ್ಲಿ ಬಿದ್ದು ನಾಪತ್ತೆಯಾಗಿದ್ದಾರೆ. ರೈಮಂಡ್ ಕ್ಲೇಮೆಂಟ್, ಸನ್ನಿ ಜಾನ್ಸನ ಕಲ್ಲಗುಂಟ್ಲಾ ಹಾಗೂ ಗಜಾನನ ರಾಜಶೇಖರ ಎಂಬುವವರು ನೀರಿನಲ್ಲಿ ನಾಪತ್ತೆಯಾಗಿದ್ದಾರೆ.
ನತಾಶಾ ಭಂಡಾರಿ ಹಾಗೂ ಸಲ್ಮಾನ ಪಿಳ್ಳೆ ಎನ್ನುವವರನ್ನು ಕುರಿಗಾಯಿಗಳು ರಕ್ಷಣೆ ಮಾಡಿದ್ದಾರೆ. ಸ್ಥಳಕ್ಕರ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿ ನಾಪತ್ತೆಯಾದವರಿಗೆ ಶೋಧ ಕಾರ್ಯ ನಡೆಸಿದ್ದಾರೆ.
Kshetra Samachara
22/01/2021 09:49 pm