ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮನೆಕೆಲಸಕ್ಕೆಂದು ಹೊರಟವಳು ಮಸಣ ಸೇರಿದಳು

ಧಾರವಾಡ: ಧಾರವಾಡಕ್ಕೆ ಮನೆಕೆಲಸಕ್ಕೆಂದು ಬರುತ್ತಿದ್ದ ಗೃಹಿಣಿಯೋರ್ವಳು ಬೈಕ್ ಮೇಲಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಹಳಿಯಾಳ ರಸ್ತೆಯಲ್ಲಿ ನಡೆದಿದೆ.

ಧಾರವಾಡ ತಾಲೂಕಿನ ಬೆನಕಟ್ಟಿ ಗ್ರಾಮದ ದಿಲಶಾದ್ ಬಸ್ಮಿಲ್ಲಾ (45) ಎಂಬ ಗೃಹಿಣಿಯೇ ಮೃತಪಟ್ಟವಳು.

ಬೈಕ್ ಮೇಲೆ ಧಾರವಾಡಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ನಾಯಿಯೊಂದು ಅಡ್ಡ ಬಂದಿದ್ದರಿಂದ ಅದನ್ನು ತಪ್ಪಿಸಲು ಹೋದ ಬೈಕ್ ಸವಾರ ಸ್ಕಿಡ್ ಆಗಿ ಬಿದ್ದಿದ್ದಾನೆ. ಹಿಂಬದಿ ಕೂತಿದ್ದ ದಿಲಶಾದ್ ಅವರಿಗೆ ಗಂಭೀರವಾದ ಗಾಯವಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್ ಸವಾರನಿಗೂ ಗಾಯಗಳಾಗಿವೆ.

ಮನೆಯ ಹೆಣ್ಣು ಮಗಳನ್ನು ಕಳೆದುಕೊಂಡ ದಿಲಶಾದ್ ಮನೆಯಲ್ಲಿ ಅವರ ಕುಟುಂಬಸ್ಥರ ರೋಧನ ಮುಗಿಲುಮುಟ್ಟಿತ್ತು. ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Edited By : Nagesh Gaonkar
Kshetra Samachara

Kshetra Samachara

21/01/2021 12:23 pm

Cinque Terre

98.58 K

Cinque Terre

7

ಸಂಬಂಧಿತ ಸುದ್ದಿ