ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಹತ್ತಿ ಸೊಸೈಟಿಯಲ್ಲಿ ಚಾಲಕನ ಅಜಾಗೃಕತೆಯಿಂದ ಮಹಿಳೆ ಸಾವು

ಅಣ್ಣಿಗೇರಿ : ಪಟ್ಟಣದ ದಿ.ಅಣ್ಣಿಗೇರಿ ಅಗ್ರಿಕಲ್ಚರಲ್ ಪ್ರೊಡ್ಯೂಸ್ ಕೋ ಆಫರೇಟಿವ್ ಆ್ಯಂಡ್ ಪ್ರೊಸೆಸಿಂಗ್ ಸೊಸೈಟಿ (ರಿ) ಯಲ್ಲಿ ಇಂದು ಬೆಳಗಿನ ಜಾವ ಎಂದಿನಂತೆ ಶ್ಯಾಗೋಟಿ ಗ್ರಾಮದ ಸುಜಾತಾ ಹನಮಂತಪ್ಪ ಕಿರಗೊಣ್ಣವರ(ದೊಳಪ್ಪನವರ)(35) ಅವರು ಕೆಲಸ ಮಾಡ್ತಿದ್ದರು. ಅದೇ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಾಲಕ ಮುತ್ತು ಎಂಬಾತನು ಅಜಾಗೃಕತೆಯಿಂದ ಟ್ರ್ಯಾಕ್ಟರನ್ನು ಹಿಂದಕ್ಕೆ ತೆಗೆದುಕೊಳ್ಳುವಾಗ ಸ್ಥಳದಲ್ಲಿದ್ದ ಮಹಿಳೆಗೆ ಡಿಕ್ಕಿ ಪಡಿಸಿದ್ದಾನೆ. ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಇದೇ ಸೊಸೈಟಿಯಲ್ಲಿ ಭಾರತೀಯ ಹತ್ತಿ ನಿಗಮದ ವತಿಯಿಂದ ಬೆಂಬಲ ಬೆಲೆ ಯೋಜನೆಯಲ್ಲಿ ಹತ್ತಿ ಖರೀದಿ ಮಾಡಲಾಗುತ್ತಿದೆ. ಅಪಘಾತ ಪಡಿಸಿದ ಟ್ಯಾಕ್ಟರ ಚಾಲಕ ಸಿಸಿಐ ಯಲ್ಲಿ ದಿನಗೂಲಿಯಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಮೃತ ಮಹಿಳೆ ಇದೇ ಸೊಸೈಟಿಯಲ್ಲಿ ಕಳೆದ 7 ವರ್ಷಗಳಿಂದ ಕೆಲಸ ಮಾಡುತ್ತಿದ್ದಳು ಎಂದು ಆಕೆಯ ಕುಟುಂಬಸ್ಥರು ತಿಳಿಸಿದರು. ಘಟನಾ ಸ್ಥಳಕ್ಕೆ ಪಿಎಸ್ಐ ಲಾಲಸಾಬ ಜೂಲಕಟ್ಟಿ ಹಾಗೂ ಸಿಪಿಐ ಚಂದ್ರಶೇಖರ ಮಠಪತಿ ಬೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

10/01/2021 03:46 pm

Cinque Terre

111.8 K

Cinque Terre

2

ಸಂಬಂಧಿತ ಸುದ್ದಿ