ಕುಂದಗೋಳ : ಅತಿವೇಗದ ಬೈಕ್ ಚಾಲನೆ ಮಾಡಿದ ಬೈಕ್ ಸವಾರನೋರ್ವ ತನ್ನ ಹೆಂಡತಿಯ ಪ್ರಾಣವನ್ನೇ ಬಲಿ ನೀಡಿರುವ ಘಟನೆ ಗುರುವಾರ ಹುಬ್ಬಳ್ಳಿ ಲಕ್ಷ್ಮೇಶ್ವರ ಹೆದ್ದಾರಿಯ ಶಿರೂರು ಗ್ರಾಮದ ರೈಲ್ವೆ ಬ್ರಿಡ್ಜ್ ಬಳಿ ನಡೆದಿದೆ.
ಧಾರವಾಡದ ಲಕ್ಷ್ಮೀಸಿಂಗನಕೇರಿಯ ಇಸ್ಮಾಯೀಲ್ ಅಡ್ಡಾದ ಮಂಜುನಾಥ ಹಳ್ಯಾಳ ಎಂಬಾತ ಹೊಸ ತನ್ನ ಹೊಸ ಪ್ಯಾಶನ್ ಪ್ರೋ ಬೈಕ್ ತೆಗೆದುಕೊಂಡು ಹೆಂಡತಿ ಗೀತಾ ಹಾಗೂ ಮಕ್ಕಳ ಸಮೇತ ಲಕ್ಷ್ಮೇಶ್ವರ ಕಡೆಯಿಂದ ಕುಂದಗೋಳ ಮಾರ್ಗವಾಗಿ ನಿಷ್ಕಾಳಜಿಯಿಂದ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದು ಶಿರೂರು ಗ್ರಾಮದ ರೈಲ್ವೆ ಬ್ರಿಡ್ಜ್ ಬಳಿ ಇರುವ ರೋಡ್ ಬ್ರೇಕ್ ಜಿಗಿಸಿದ ಪರಿಣಾಮ ಹಿಂಬದಿ ಸವಾರಳಾದ ಹೆಂಡತಿ ಗೀತಾ ಕೆಳಗೆ ಬಿದ್ದು ಗಾಯಗೊಂಡಿದ್ದಾಳೆ, ತಕ್ಷಣ ಕುಂದಗೋಳ ಆಸ್ಪತ್ರೆಗೆ ದಾಖಲಿಸಿ ಅಲ್ಲಿ ಸೂಕ್ತ ಚಿಕಿತ್ಸೆ ಫಲಿಸದೆ ಎಸ್.ಡಿ.ಎಂ ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಿಸದೆ ಕೊನೆ ಉಸಿರು ಎಳೆದಿದ್ದಾಳೆ.
ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
Kshetra Samachara
09/01/2021 09:47 am