ಧಾರವಾಡ: ಟಿಪ್ಪರ್ ವಾಹನವೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿರುವ ಘಟನೆ ಧಾರವಾಡದ ಕೆಎಂಎಫ್ ಬಳಿ ನಡೆದಿದೆ.
ಧಾರವಾಡ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಕಾರಿಗೆ ಹಿಂದಿನಿಂದ ಬಂ ಟಿಪ್ಪರ್ ಡಿಕ್ಕಿ ಹೊಡೆದಿದೆ. ಇದರಿಂದ ನಿಯಂತ್ರಣ ಕಳೆದುಕೊಂಡು ಕಾರು ಚಾಲಕ ತನ್ನ ಕಾರನ್ನು ಬಿಆರ್ ಟಿಎಸ್ ಬ್ಯಾರಿಕೇಡ್ ಗೆ ಡಿಕ್ಕಿಪಡಿಸಿದ್ದಾನೆ. ಇದರಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಕಾರಿನಲ್ಲಿದ್ದ ಮಲ್ಲಿಕಾರ್ಜುನ ಎಂಬುವವರು ಪ್ರಾಣಾಪಾಯದಿಂದ ಪಾರಾಗಿದ್ದು, ಕಾಲಿಗೆ ಪೆಟ್ಟಾಗಿದೆ. ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.ರಾಮಪ್ಪ ಗಾಣಗೇರ ಎಂಬುವವರಿಗೆ ಸೇರಿದ ಟಿಪ್ಪರನಿಂದ ಈ ಅವಘಡ ಸಂಭವಿಸಿದೆ.
ಧಾರವಾಡದ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎರಡೂ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Kshetra Samachara
08/01/2021 12:59 pm