ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಿಯುಸಿಯಲ್ಲಿ ಶೇ. 96 ಅಂಕ ಪಡೆದಿದ್ದ ಹುಬ್ಬಳ್ಳಿಯ ಯುವಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

ಹುಬ್ಬಳ್ಳಿ:ರೈಲ್ವೆ ಹಳಿಗೆ ತಲೆಕೊಟ್ಟು ಪ್ರತಿಭಾವಂತ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಸವಣೂರು ತಾಲೂಕು ಯಲವಿಗಿ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

ಮೃತ ಯುವಕನನ್ನು ಗದಗ ಜಿಲ್ಲೆ ನರಗುಂದ ತಾಲೂಕಿನ ರೆಡ್ಡಿರ್ ನಾಗನೂರು ಗ್ರಾಮದ ಅಡಿವೆಪ್ಪ ಹಾದಿಮನಿ (22) ಎಂದು ಗುರುತಿಸಲಾಗಿದೆ.

ಅಡಿವೆಪ್ಪ ಮನೆಯಲ್ಲಿ ಮೂವರು ಮಕ್ಕಳಲ್ಲಿ ಈತನೇ ಹಿರಿಯ ಮಗನಾಗಿದ್ದು, ಮನೆಯ ಜವಾಬ್ದಾರಿ ಹೊತ್ತುಕೊಂಡಿದ್ದ.

ಮನೆಯ ಕಷ್ಟದ ನಿವಾರಣೆಗಾಗಿ ಕಿಡ್ನಿ ದಾನ ಮಾಡಲು ಮುಂದಾಗಿದ್ದ. ಯಾವುದೇ ಸಮಸ್ಯೆ ಬಗೆಹರಿಯದಿದ್ದಾಗ ಮಾನಸಿಕವಾಗಿ ನೊಂದು ಡೆತ್ ನೋಟು ಬರೆದಿಟ್ಟು ರೈಲಿಗೆ ತಲೆಕೊಟ್ಟಿದ್ದಾನೆ.

ಪಿಯುಸಿಯಲ್ಲಿ ಶೇ. 96 ಅಂಕ ಪಡೆದಿದ್ದ ಅದಲ್ಲದೆ ಬಿ ಎಸ್ ಸಿಯ ಬಾಹ್ಯ ವ್ಯಾಸಂಗ ಮಾಡುತ್ತಿದ್ದ.

ಮನೆಯ ನಿರ್ವಹಣೆಗೆ ದಾವಣಗೆರೆಯಲ್ಲಿ ಕೆಲಸ ಮಾಡಿಕೊಂಡಿದ್ದ ಈತ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಹಳಿ ಮೇಲೆ ತಲೆ ಭಾಗ ದೇಹದಿಂದ ಬೇರ್ಪಟ್ಟಿದೆ.

ಹುಬ್ಬಳ್ಳಿಯ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

06/01/2021 01:20 pm

Cinque Terre

83.47 K

Cinque Terre

32

ಸಂಬಂಧಿತ ಸುದ್ದಿ