ಹುಬ್ಬಳ್ಳಿ- ಕಾರೊಂದು ಎಮ್ಮೆಗೇ ಗುದ್ದಿದ ಪರಿಣಾಮ ಎಮ್ಮೆ ಗಂಭೀರವಾಗಿ ಗಾಯಗೊಂಡ ಘಟನೆ ಗಬ್ಬೂರ ಬೈಪಾಸ್ ಬಳಿ ನಡೆದಿದೆ…
ಬೆಂಗಳೂರಿನಿಂದ ಪ್ರವೀಣ ಎಂಬುವರಿಗೆ ಸೇರಿದ, ಕಾರು ಎಮ್ಮೆಗೆ ಡಿಕ್ಕಿ ಹೊಡೆದಿದೆ ಹೀಗಾಗಿ, ಎಮ್ಮೆಯ ನಾಲ್ಕು ಕಾಲುಗಳು ಕೂಡಾ ಸಂಪೂರ್ಣವಾಗಿ ಮುರಿದು ಹೋಗಿದ್ದು, ರಸ್ತೆಯ ಮಧ್ಯಯೇ ಸಾವು ಬದುಕಿನ ಹೋರಾಟ ನಡೆಸುತ್ತಿದೆ..
ಹುಬ್ಬಳ್ಳಿಯ ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಬಂದಿದ್ದಾರೆ, ಆದ್ರೆ ಎಮ್ಮೆಯನ್ನು ಯಾವ ರೀತಿಯಾಗಿ ಆಸ್ಪತ್ರೆಗೆ ದಾಖಲಿಸಬೇಕು ಎಂಬ ಗೊಂದಲದಲ್ಲಿದ್ದಾರೆ….ಇನ್ನು ಮಾತು ಬಾರದ ಎಮ್ಮೆ ಮಾತ್ರ ತನ್ನ ಸಂಕಟವನ್ನು ಹೇಳಲು ಬಾಯಿ ಇಲ್ಲದೆ ನಡುರಸ್ತೆಯಲ್ಲಿಯೇ ಜೀವನ್ಮರಣದ ನಡುವೆ ಹೋರಾಟವನ್ನು ನಡೆಸುತ್ತಿದೆ....
Kshetra Samachara
01/01/2021 10:36 pm