ಅಣ್ಣಿಗೇರಿ : ಸಮೀಪದ ಬಸಾಪೂರ ಹತ್ತಿರದ ಮಲಪ್ರಭಾ ಕಾಲುವೆಯಲ್ಲಿ ಸ್ನಾನ ಮಾಡಲು ಹೋಗಿ ನಾಪತ್ತೆಯಾದ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ.
ನಾಪತ್ತೆಯಾದ ಯುವಕ ಸ್ಥಳೀಯ ಆದಿವಾಸಿ ನಗರದ ಭರತ ಬಸವರಾಜ ಹರನಶಿಕಾರಿ (17) ಎಂದು ತಿಳಿದು ಬಂದಿದೆ. ಮಲಪ್ರಭಾ ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ನೀರಿನ ರಭಸಕ್ಕೆ ಯುವಕ ನಾಪತ್ತೆಯಾಗಿದ್ದಾನೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಮತ್ತು ಅಗ್ನಿಶಾಮಕ ಠಾಣೆ ಸಿಬ್ಬಂದಿಗಳು ಬೇಟಿ ನೀಡಿ ಯುವಕನನ್ನು ಪತ್ತೆ ಹಚ್ಚುವಲ್ಲಿ ಹರಸಾಹಸ ಪಡುತ್ತಿದ್ದಾರೆ. ಈಗಾಗಲೆ ಬಸಾಪೂರ ಕಾಲುವೆಯಿಂದ ನಾವಳ್ಳಿ ಹತ್ತಿರದ ಕಾಲುವೆ ವರೆಗೆ ಹುಡುಕಾಟ ಮಾಡಿದರು ಯುವಕನ ಸುಳಿವು ಸಿಕ್ಕಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದ್ದಾರೆ.
Kshetra Samachara
28/12/2020 08:26 pm