ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ:ಕರಿ ಬಂಡಿ ಉತ್ಸವ-ಬೆದರಿದ ಎತ್ತು-ಹೆದರಿದ ಮಹಿಳೆ!

ಕುಂದಗೋಳ: ಕುಂದಗೋಳದ ಕರಿಬಂಡಿ ಉತ್ಸವ ಕಳೆದೆರಡು ವರ್ಷದಿಂದ ನಡೆದಿರಲೇ ಇಲ್ಲ. ಆದರೆ, ನಿನ್ನೆ ನಡೆದ ಉತ್ಸವದಲ್ಲಿ

ಮೂರು ಅಚಾತುರ್ಯ ನಡೆದು ಹೋಗಿವೆ. ಈ ಘಟನೆಯ ದೃಶ್ಯಗಳು ವಾಟ್ಸಾಪ್, ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಹೌದು ! ಕರಿ ಬಂಡಿ ಉತ್ಸವಕ್ಕೂ ಮೊದಲು ಮಧ್ಯಾಹ್ನ ನಡೆದ ಎತ್ತುಗಳ ಮೆರವಣಿಗೆ ನಡೆಯಿತು. ಇದೇ ವೇಳೆ ರಸ್ತೆ ಕ್ರಾಸ್ ಮಾಡಿ ಎತ್ತುಗಳು ಓಡುವಾಗ, ಎತ್ತುಗಳೂ ಬರೋದನ್ನ ಅರಿಯದೇ ಎದುರಿಗೆ ಮಹಿಳೆ ಸ್ಕೂಟಿ ಚಲಾಯಿಸಿಕೊಂಡು ಬಂದರು. ಇದರಿಂದ ಎತ್ತುಗಳ ನೊಗ ಮಹಿಳೆಗೆ ರಭಸವಾಗಿ ಬಡೆಯಿತು. ಮಹಿಳೆ ತಕ್ಷಣ ನೆಲಕ್ಕೆ ಬಿದ್ದರು. ಆಗ ಸ್ಥಳೀಯರು ಮಹಿಳೆಯನ್ನ

ಆಸ್ಪತ್ರೆಗೆ ದಾಖಲಿಸಿದ್ದು, ಮಹಿಳೆ ಸೇಫ್ ಆಗಿದ್ದಾರೆ.

ಇನ್ನೂ ಸಂಜೆ ಬ್ರಹ್ಮದೇವರ ದರ್ಶನ ಪಡೆದು ಎತ್ತುಗಳು ಮರಳುತಿದ್ದವು. ಆಗ ಎತ್ತುಗಳು ಬೆದರಿದವು. ಇದರ ಪರಿಣಾಮ ಮೂರಂಗಡಿ ಕ್ರಾಸ್ ಬಳಿ ಅಂಗಡಿಯೊಂದಕ್ಕೆ ಎತ್ತುಗಳೂ ನುಗ್ಗಿದವು. ಆಗ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾದವು. ಅಷ್ಟೇ. ಇಲ್ಲೂ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ದತ್ತಾತ್ರೇಯ ದೇವಸ್ಥಾನದ ಎಡೆಗೆ ಇದೇ ಎತ್ತುಗಳು ಮಾರ್ಕೇಟ್ ರಸ್ತೆ ಮೂಲಕ ರಭಸದಿಂದ ಓಡುತ್ತಿದ್ದವು. ಈ ಸಮಯದಲ್ಲಿಯೇ ಮಳೆಯಾದ ಪರಿಣಾಮ ಎತ್ತಿನ ಕಾಲು ಜಾರಿ ಬಿಟ್ಟಿತ್ತು. ಆಗ ಎತ್ತುಗಳು ನೆಲಕ್ಕೆ ಮಂಡಿಯೂರಿದವು. ಕೂಡಲೇ ರೈತರು ಎತ್ತನ್ನು ಮೇಲೆತ್ತಿ ಸುಧಾರಿಸಿ ಬಂಡಿ ಯಶಸ್ವಿಗೊಳಿಸಿದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

15/06/2022 03:58 pm

Cinque Terre

85.98 K

Cinque Terre

5

ಸಂಬಂಧಿತ ಸುದ್ದಿ