ನವಲಗುಂದ : ತಾಲ್ಲೂಕಿನ ಯಮನೂರ ಗ್ರಾಮದ ಬಳಿಯ ಬೆಣ್ಣೆ ಹಳ್ಳದ ಸೇತುವೆ ಮೇಲೆ ಅಪಘಾತದ ಸಂಭವ ಹೆಚ್ಚಾದಂತಾಗಿದೆ. ರಾಷ್ಟ್ರೀಯ ಹೆದ್ದರಿಯ ಮೇಲೆ ನಿಲುಗಡೆಯಾಗುತ್ತಿರುವ ವಾಹನಗಳಿಂದ ಪ್ರಯಾಣಕ್ಕೆ ಕಿರಿಕಿರಿ ಉಂಟಾಗುತ್ತಿದೆ.
ಯಮನೂರ ಚಾಂಗದೇವನ ದರ್ಶನಕ್ಕೆಂದು ಬಂದ ಭಕ್ತರಿಂದ ರಾಷ್ಟ್ರೀಯ ಹೆದ್ದಾರಿ ಮೇಲೆ ವಾಹನ ನಿಲುಗಡೆ ಹೆಚ್ಚಾಗುತ್ತಿದೆ. ಇದರಿಂದ ಬೃಹತ್ ಗಾತ್ರದ ವಾಹನಗಳ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿದೆ. ಅಷ್ಟೇ ಅಲ್ಲದೆ ಭಕ್ತರು ರಾಷ್ಟ್ರೀಯ ಹೆದ್ದಾರಿ ಮೇಲೆ ಬೇಕಾಬಿಟ್ಟಿ ಸಂಚರಿಸುವುದು ಈಗ ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ.
Kshetra Samachara
03/02/2022 07:00 pm