ಆ ಒಂದು ಅಪಘಾತ ನಿಜಕ್ಕೂ ಕರುಳು ಕಿತ್ತು ಬರುವಂತ ದೃಶ್ಯಗಳಿಗೆ ಸಾಕ್ಷಿಯಾಗಿದೆ. ಕಿಮ್ಸ್ ಆಸ್ಪತ್ರೆಯಲ್ಲಿಯೇ ಕರುಳು ಹಿಂಡುವ ದೃಶ್ಯವೊಂದು ಕಂಡು ಬಂದಿದೆ.
ಹೌದು.ಅಪಘಾತದಲ್ಲಿ ಗಾಯಗೊಂಡ ತಾಯಿ ಕಂಡು ಕಂದಮ್ಮ ಬಿಕ್ಕಿ ಬಿಕ್ಕಿ ಅಳುತ್ತಿದೆ. ತೀವ್ರ ನೋವಿನಲ್ಲೂ ಆಂಬ್ಯುಲೆನ್ಸ್ ನಲ್ಲಿ ಮಗುವನ್ನು ಎತ್ತಿಕೊಂಡ ತಾಯಿ ಮಗುವನ್ನು ಸಮಾಧಾನ ಪಡಿಸಿದ್ದಾರೆ.
ಮಹಾರಾಷ್ಟ್ರ ಮಹೇಂದ್ರ ಎಂಬ ಒಂದೂವರೆ ವರ್ಷದ ಕಂದನ ಆಕ್ರಂದನ ನಿಜಕ್ಕೂ ನೋಡುಗರ ಕಣ್ಣಲ್ಲಿ ನೀರು ಜಿನುಗುವಂತೆ ಮಾಡಿದ್ದು, ಮಹೇಂದ್ರ ತಾಯಿ ಜ್ಯೋತಿ ಎಂಬುವವರಿಗೆ ರಸ್ತೆ ಅಪಘಾತದಲ್ಲಿ ತೀವ್ರ ಪೆಟ್ಟು ಬಿದ್ದಿದೆ. ತಾಯಿ ಜೊತೆಗೆ ಅದೇ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಮಹೇಂದ್ರ ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
24/05/2022 05:08 pm