ಲಕ್ಷ್ಮೇಶ್ವರ: ಅಗಸ್ತ್ಯ ಮುನಿಗಳ ತಪೋ ಭೂಮಿಗೆ ಇಲ್ಲ ಕಾಯಕಲ್ಪ: ತಡೆಗೋಡೆ ನಿರ್ಮಿಸಿ ಅಪಘಾತ ತಡೆಯಿರಿ

ಲಕ್ಷ್ಮೇಶ್ವರ: ಅದು ಅಗಸ್ತ್ಯ ಮುನಿಗಳು ತಪಸ್ಸು ಮಾಡಿರೋ ಪುಣ್ಯ ಸ್ಥಳ. ಆದರೆ, ಇತ್ತಿಚೆಗೆ ಆ ಪವಿತ್ರ ಸ್ಥಳ ಸಾವಿನ ಹಾಟ್ ಸ್ಪಾಟ್ ಆಗಿ ಪರಿವರ್ತನೆಯಾಗಿದೆ. ಹೌದು ಜೀವನದಲ್ಲಿ ಜಿಗುಪ್ಸೆ ಹೊಂದಿದವರು ಇದೇ ಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಳ್ತಾಯಿದ್ದಾರೆ. ಇನ್ನೂ ಈಜಲು ಮಕ್ಕಳು, ಯುವಕರು ಈ ಹೊಂಡಕ್ಕೆ ಹೋಗಿ ಸಾವನ್ನಪ್ಪುತ್ತಿದ್ದಾರೆ.ಆದರೆ ಇದುವರೆಗೂ ಕೂಡ ಯಾವುದೇ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ.ಹಾಗಿದ್ದರೇ ಯಾವುದೂ ಆ ಸ್ಥಳ ಅಂತೀರಾ ಈ ಸ್ಟೋರಿ ನೋಡಿ..

ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಐತಿಹಾಸಿಕ ಅಗಸ್ತ್ಯ ತೀರ್ಥ ಹೊಂಡ, ಸಾವಿನ ಹಾಟ್ ಸ್ಪಾಟ್..! ಅಗಸ್ತ್ಯ ತೀರ್ಥ ಹೊಂಡಕ್ಕೆ ತಡೆಗೋಡೆ ನಿರ್ಮಾಣ ಮಾಡುವಂತೆ ಸ್ಥಳೀಯರ ಒತ್ತಾಯ.! ಹೌದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಈ ಪುರಾತನ ಹೊಂಡಕ್ಕೆ ತನ್ನದೆಯಾದ ಇತಿಹಾಸ ಹೊಂದಿದೆ. ಆದ್ರೆ, ಮೊನ್ನೆ ದೀಪಾವಳಿ ಹಬ್ಬಕೆಂದು ಹಾವೇರಿ ಜಿಲ್ಲೆಯ ಬ್ಯಾಡಗಿಯಿಂದ ಲಕ್ಷ್ಮೇಶ್ವರ ಪಟ್ಟಣಕ್ಕೆ ತನ್ನ ತಾಯಿ‌ ಜೊತೆಗೆ ಬಂದಿದ್ದ, 15 ವರ್ಷದ ಹರ್ಷವರ್ಧನ ಅರಕೇರಿ ಎನ್ನುವ ಬಾಲಕ ಹೊಂಡದಲ ಜೀವ ಕಳೆದುಕೊಂಡಿದ್ದಾನೆ ಇನ್ನೂ ಈ ಹೊಂಡದಲ್ಲಿ ಅದು ಅನೇಕ ಜೀವಗಳು ಹೋಗಿವೆ ಇನ್ನೂ ಎಷ್ಟು ಜೀವಗಳು ಈ ಹೊಂಡದಲ್ಲಿ ಹೋಗುತ್ತೋ ಗೊತ್ತಿಲ್ಲ ಅದಕ್ಕೂ ಮುಂಚೆ ಪುರಸಭೆಯ ಅಧಿಕಾರಿಗಳು ಎಚ್ಚೇತಕೊಳ್ಳಬೇಕಿದೆ.ರಾತ್ರಿಯಲ್ಲಿ ಅನೈತಿಕ ತಾಣವಾಗಿ ಮಾರ್ಪಟಿದ್ದೆ ಇನ್ನೂ ಕುಡುಕರ ಹಾವಳಿಯಂತೂ ಜೋರಾಗಿದೆ.

ಇನ್ನೂ ಈ ಪುಣ್ಯ ಸ್ಥಳದಲ್ಲಿ ಅಗಸ್ತ್ಯ ಮುನಿಗಳು ತಪಸ್ಸು ಮಾಡಿದ್ದಾರೆ. ಹಾಗಾಗಿ, ಪ್ರತಿ ಸಂಕ್ರಮಣದಲ್ಲಿ ಈ ಹೊಂಡದಲ್ಲಿ ಪವಿತ್ರ ಸ್ನಾನ ಮಾಡೋದು ವಾಡಿಕೆ. ಆದರೆ ಈ ಹೊಂಡಕ್ಕೆ ತಡೆಗೋಡೆ ನಿರ್ಮಾಣ ಮಾಡಿಲ್ಲಾ. ಹೀಗಾಗಿ ಮಕ್ಕಳು ಬಾಲಕರು ಈಜಲು ಹೊಂಡಕ್ಕೆ ಇಳಿಯುತ್ತಾರೆ. ಸರಿಯಾಗಿ ಈಜಲು ಬಾರದಿದ್ರೆ ಮುಗಿದು ಅವರು ದಾರುಣವಾಗಿ ಸಾವನ್ನಪ್ಪುತ್ತಿದ್ದಾರೆ. ಜೀವನದಲ್ಲಿ ಜಿಗುಪ್ಸೆ ಹೊಂದಿದವರು ಇಲ್ಲಿಯೇ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜಾನುವಾರುಗಳ ಸಹ ಸಾವನ್ನಪ್ಪಿತ್ತಿವೆ. ಪ್ರತಿ ಭಾರಿ ದುರ್ಘಟನೆ ನಡೆದಿದಾಗ ಲಕ್ಷ್ಮೇಶ್ವರ ಪುರಸಭೆ ಮಾಹಿತಿ ನೀಡುತ್ತಾರೆ. ಆದರೆ, ಪುರಸಭೆ ಅಧಿಕಾರಿಗಳು ಮಾತ್ರ ಅಗಸ್ತ್ಯ ತೀರ್ಥ ಹೊಂಡಕ್ಕೆ ತಡೆಗೋಡೆ ನಿರ್ಮಾಣ ಮಾಡುವ ಬಗ್ಗೆ ಕೇಳಿದ್ರೆ ಹೇಳೋದು ಹೀಗೆ...

ಇನ್ನೂ ಮೃತ ಬಾಲಕ ತಾಯಿ ಒಬ್ಬನೇ ಮಗ ಆತ ಕೂಡಾ ದೀಪಾವಳಿ ಹಬ್ಬಕ್ಕೆ ಬಂದು ಅಮೂಲ್ಯವಾದ ಜೀವವನ್ನು ಕಳೆದುಕೊಂಡಿದ್ದಾನೆ. ಈ ಪುರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಇನ್ನೂ ಎಷ್ಟು ಬಲಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನಾದರೂ ಪುರಸಭೆ ಅಧಿಕಾರಿಗಳು ಎಚ್ಚತ್ತುಕೊಂಡು ತಡೆಗೋಡೆ ನಿರ್ಮಾಣ ಮಾಡಿ ಜೀವವನ್ನು ಕಾಪಾಡಬೇಕಾಗಿದೆ.

Kshetra Samachara

Kshetra Samachara

5 months ago

Cinque Terre

65.69 K

Cinque Terre

2

  • Ravichandragowda F Maralinganagowdar
    Ravichandragowda F Maralinganagowdar

    Alli MLA yen madathavane

  • Manjunath doddamani
    Manjunath doddamani

    zzA TO~,?∆•••<∆,As"2A