ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕಾರು ಸಾರಿಗೆ ಬಸ್ಸ್ ನಡುವೆ ರಸ್ತೆ ಅಪಘಾತ ಇರ್ವರಿಗೆ ಗಾಯ ರಕ್ತಸ್ರಾವ

ಕುಂದಗೋಳ : ಕಾರು ಮತ್ತು ಸಾರಿಗೆ ಬಸ್ ನಡುವೆ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಕಾರ ಚಾಲಕ ಹಾಗೂ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಇನ್ನೋರ್ವ ಪ್ರಯಾಣಿಕರಿಗೆ ಗಾಯವಾದ ಘಟನೆ ಕುಂದಗೋಳ ಸಮೀಪದ ಸಂಶಿ- ಎರೆಬೂದಿಹಾಳ ಕ್ರಾಸ್ ನಲ್ಲಿ ಸಂಭವಿಸಿದೆ.

ಗಾಯಾಳುಗಳು ಎರೆಬೂದಿಹಾಳ ಗ್ರಾಮದ ಸಿದ್ದಲಿಂಗಯ್ಯ ಅಡವಯ್ಯನವರಮಠ, ಬಸುರಾಜ ಬೂದಗಣ್ಣನವರ ಎಂದು ತಿಳಿದು ಬಂದಿದ್ದು ಎರೆಬೂದಿಹಾಳದಿಂದ ಹುಬ್ಬಳ್ಳಿಗೆ ಕಾರಿನಲ್ಲಿ ಹೊರಟಿದ್ದ ಇವರು ಹುಬ್ಬಳ್ಳಿಯಿಂದ ಲಕ್ಷ್ಮೇಶ್ವಕ್ಕೆ ಹೊರಟು ಸಾರಿಗೆ ಬಸ್ಸಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.

ಕಾರ ಚಾಲಕ ಹಾಗೂ ಸಹ ಸವಾರನಿಗೆ ಗಾಯಗಳಾಗಿ ರಕ್ತಸ್ರಾವವಾಗುತ್ತಿದ್ದ ವೇಳೆ ಇದೇ ರಸ್ತೆಯಲ್ಲಿ ಪ್ರಯಾಣ ಬೆಳೆಸಿದ್ದ ಕಾಂಗ್ರೆಸ್ ಮುಖಂಡ ಶಿವಾನಂದ ಬೆಂತೂರ ತಮ್ಮ ವಾಹನದಲ್ಲಿ ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಗೆ ಕಳುಹಿಸಿದ್ದಾರೆ.

ಇನ್ನೂ ಘಟನಾ ಸ್ಥಳಕ್ಕೆ ಕುಂದಗೋಳ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆಹಾಕುತ್ತಿದ್ದಾರೆ. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Edited By : Nagesh Gaonkar
Kshetra Samachara

Kshetra Samachara

26/09/2020 01:56 pm

Cinque Terre

47.43 K

Cinque Terre

4

ಸಂಬಂಧಿತ ಸುದ್ದಿ