ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಮರಿಗೆ ಜಾರಿದ ಹುಬ್ಬಳ್ಳಿ-ಹೆಬ್ಬಳ್ಳಿ ಬಸ್ ತಪ್ಪಿದ ಅನಾಹುತ

ಹುಬ್ಬಳ್ಳಿ- ಇಂದು ಬೆಳಿಗ್ಗೆ ಹುಬ್ಬಳ್ಳಿಯಿಂದ ಹೆಬ್ಬಳ್ಳಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಕಮರಿಗೆ ಜಾರಿದ್ದು, ಕೂದಲೆಳೆ ಅಂತರದಲ್ಲಿ ಅನಾಹುತ ತಪ್ಪಿದ ಘಟನೆ ಹಿರೇಹಳ್ಳದ ಸಮೀಪ ನಡೆದಿದೆ.

ಸುಮಾರು 10 ಪ್ರಯಾಣಿಕರಿದ್ದ ಬಸ್, ಎದುರಿಗೆ ಕುರಿ ಹೇರಿಕೊಂಡು ಬರುತ್ತಿದ್ದ ವಾಹನ ಮುಂದೆ ಬಂದಾಗ, ಪಾಟಾ ಕಟ್ ಆಗಿ ಕಮರಿಗೆ ತಿರುವಿದೆ.

ಚಾಲಕನ ಜಾಣಾಕ್ಷತನದಿಂದ ಬ್ರೇಕ್ ಗಟ್ಟಿ ಹಿಡಿದು ಕಮರಿಗೆ ಬೀಳದಂತೆ ತಡೆದಿದ್ದಾರೆ.

ಬಸ್ ಎದುರಿಗೆ ಬರುತ್ತಿದ್ದ ವಾಹನದವರು ಇದನ್ನ ನೋಡಿ ಗಾಬರಿಯಾಗಿ, ಅವರ ವಾಹನವೂ ಸ್ವಲ್ಪ ರಸ್ತೆಯನ್ನ ಬಿಟ್ಟು ಹೋಗಿವೆ.

ಹೆಬ್ಬಳ್ಳಿ-ಹುಬ್ಬಳ್ಳಿ ರಸ್ತೆ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದೇ ಇಂತಹ ಅವಘಡಗಳಿಗೆ ಕಾರಣವಾಗುತ್ತಿದೆ.

ರಸ್ತೆಯ ಅಂಚಿನಲ್ಲಿ ತೆಗ್ಗು ಇರುವುದರಿಂದ ವಾಹನಗಳು ಸೈಡ್ ತೆಗೆದುಕೊಳ್ಳುವಾಗ ಕಮರಿಗೆ ಬೀಳುವಂತಹ ಸ್ಥಿತಿ ಸಾಮಾನ್ಯವಾಗಿದೆ ಭಾರೀ ಅನುಹುತ ಸಂಭವಿಸುವ ಮೊದಲು ಈ ರಸ್ತೆ ಸರಿಪಡಿಸಬೇಕಿದೆ.

Edited By : Nirmala Aralikatti
Kshetra Samachara

Kshetra Samachara

21/09/2020 10:37 am

Cinque Terre

66.94 K

Cinque Terre

8

ಸಂಬಂಧಿತ ಸುದ್ದಿ