ಧಾರವಾಡ: ದುಷ್ಕರ್ಮಿಗಳು ಮನೆಗೆ ಬೆಂಕಿ ಇಟ್ಟ ಪರಿಣಾಮ ನಾಲ್ಕು ಜಾನುವಾರುಗಳು ಸಜೀವವಾಗಿ ದಹನಗೊಂಡಿರುವ ಘಟನೆ ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಚನ್ನಬಸಪ್ಪ ಹನಿ ಎಂಬುವವರಿಗೆ ಸೇರಿದ ಹೊಲದ ಮನೆಗೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದಾರೆ.
ಇದರಿಂದಾಗಿ ಮನೆಯಲ್ಲಿದ್ದ ಅಪಾರ ಪ್ರಮಾಣದ ಹತ್ತಿ, ಗೋಧಿ, ಜೋಳ ಸುಟ್ಟು ಕರಕಲಾಗುವುದರ ಜೊತೆಗೆ ಆಕಳು, ಎಮ್ಮೆ ಸೇರಿದಂತೆ ನಾಲ್ಕು ಜಾನುವಾರುಗಳು ಸಜೀವ ದಹನಗೊಂಡಿವೆ.
ಹೊಲದ ಮನೆಯಿಂದ ಮನೆಯ ಮಾಲೀಕರು ಊರಿನಲ್ಲಿರುವ ಮನೆಗೆ ಬಂದ ನಂತರ ದುಷ್ಕರ್ಮಿಗಳು ಹೊಲದ ಮನೆಗೆ ಬೆಂಕಿ ಇಟ್ಟಿದ್ದಾರೆ.
ಬೆಂಕಿ ಹತ್ತಿದ ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಗ್ರಾಮಸ್ಥರು ಓಡಿ ಬರುವಷ್ಟರಲ್ಲಾಗಲೇ ಜಾನುವಾರುಗಳು ಅಸುನೀಗಿದ್ದವು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದರು.
ಇನ್ನು ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Kshetra Samachara
23/12/2020 10:04 am