ಕಲಘಟಗಿ:ಪಟ್ಟಣದ ಬೆಂಡಿಗೇರಿ ಹದ್ದಿನಲ್ಲಿನ ನಾಲ್ವರು ರೈತರುಗಳ ಸುಮಾರು ಇಪತ್ತು ಎಕರೆ ಕಬ್ಬಿನ ಹೊಲಕ್ಕೆ ಆಕಸ್ಮಿಕ ಬೆಂಕಿ ಬಿದ್ದು ಅಪಾರ ಹಾನಿಯಾಗಿರುವ ಘಟನೆ ಭಾನುವಾರ ಸಂಜೆ ಜರುಗಿದೆ.
ಪಟ್ಟಣದ ಬೆಂಡಿಗೆರಿ ಗ್ರಾಮದ ರಿ,ಸ,ಸಂಖ್ಯೆ 25,26,32 31 ನೇದ್ದರಲ್ಲಿ ಜಮೀನಿನಲ್ಲಿ ಸಂಗಪ ಹಡಪದ, ಶಿವಪ್ಪ ಗಬೂರ,ಲಕ್ಷ್ಮಣ ಬೆಟಗೇರಿ,ತುಕಾರಾಮ ಹೊಲಿಹೊಂಡ ಎಂಬುವರು ಬೆಳೆದ ಕಬ್ಬಿನ ಬೆಳೆ ಸುಟ್ಟು ಕರಕಲಾಗಿದೆ.ಕಲಘಟಗಿ ಹಾಗೂ ಹುಬ್ಬಳ್ಳಿಯ ಅಗ್ನಿಶಾಮಕ ಸಿಬ್ಬಂದಿ ಹರಸಾಹಪಟ್ಟು ಬೆಂಕಿನಂದಿಸಿದ್ದಾರೆ.
ವಿದ್ಯುತ್ ತಂತಿ ತಗುಲಿ ಅಪಾರ ಹಾನಿಯಾಗಿದೆ ಎಂದು ರೈತರು ಆರೋಪಿಸಿದ್ದಾರೆ.ಗ್ರಾಮಲೆಕ್ಕಾಧಿಕಾರಿ ಕುಮಾರ ಮುದಕಣ್ಣವರ ಭೇಟಿ ನೀಡಿ ನಷ್ಟದ ಮಾಹಿತಿ ಪಡೆದಿದ್ದಾರೆ.
Kshetra Samachara
20/12/2020 10:01 pm