ನವಲಗುಂದ : ವಿಜಯಪುರ – ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ನವಲಗುಂದ ಪಟ್ಟಣದಲ್ಲಿ ಹಾದು ಹೋಗುತ್ತೆ ಆದರೆ ಈ ರಸ್ತೆ ಈಗ ಜನರ ಪ್ರಾಣಕ್ಕಾಗಿ ಕಾದು ಕೂತಂತೆ ಕಾಣುತ್ತಿದೆ. ಯಾಕಂದರೆ ಈ ರಸ್ತೆಯಲ್ಲಿ ಪದೇ ಪದೇ ಆಗುತ್ತಿರುವ ಅಪಘಾತವೇ ಪ್ರಮುಖ ಕಾರಣ.
ಮೊದಲೇ ರಸ್ತೆ ಚಿಕ್ಕದಿದೆ ಅಂತದ್ರಲ್ಲಿ ಈ ರಸ್ತೆಯಲ್ಲಿ ಬೃಹತ್ ಪ್ರಮಾಣದ ಲಾರಿ, ಟ್ಯಾಂಕರ್, ಬಸ್ ಗಳು ಸೇರಿದಂತೆ ಹಲವು ವಾಹನಗಳ ಸಂಚಾರ ಅತೀ ವೇಗದಲ್ಲಿ ಇರುತ್ತೆ.
ಅಷ್ಟೇ ಅಲ್ಲದೇ ರಸ್ತೆಗೆ ಅಂಟಿಕೊಂಡೆ ಮನೆಗಳು, ಅಂಗಡಿಗಳು ಇರೋದ್ರಿಂದ ಅಪಾಯದ ಪ್ರಮಾಣ ಹೆಚ್ಚಿದೆ. ಇನ್ನೂ ಈ ವಲಯದಲ್ಲಿ ಅಪಘಾತದ ಮುನ್ನೆಚ್ಚರಿಕೆಯ ಕ್ರಮವಾಗಿ ಅಲ್ಲಲ್ಲಿ ಅಪಘಾತ ವಲಯ ಎನ್ನುವ ಬೋರ್ಡ್ ಹಾಕಿದರೆ, ವಾಹನ ಚಾಲಕರು ಸ್ವಲ್ಪವಾದರೂ ಎಚ್ಚರ ವಹಿಸಲು ಸಾಧ್ಯವಾಗುತ್ತದೆ.
ಇನ್ನೂ ಈ ರಸ್ತೆಯ ಅಗಲೀಕರಣ ಅತ್ಯವಶ್ಯಕವಾಗಿದೆ. ರಸ್ತೆಯ ಅಗಲೀಕರಣವಾದಲ್ಲಿ ಅಪಘಾತಗಳನ್ನು ತಡೆಯಬಹುದು. ಇನ್ನಾದರೂ ಎಚ್ಚೆತ್ತು ಸಂಬಂಧಪಟ್ಟ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿದೆ.
Kshetra Samachara
18/12/2020 07:27 pm