ಹುಬ್ಬಳ್ಳಿ- ಸಿಗ್ನಲ್ ಜಂಪ್ ಮಾಡಿ, ಆಟೋ ಚಾಲಕ ಸೀದ ಪೊಲೀಸರ ಬೈಕ್ ಗುದ್ದಿದ ಘಟನೆ ನಗರದ ಚನ್ನಮ್ಮ ವೃತ್ತದಲ್ಲಿ ನಡೆದಿದೆ.
ಸಿಗ್ನಲ್ ಬಿದ್ದಿದ್ದರು ಕೂಡಾ ಆಟೋ ಚಾಲಕ ಆಟೋ ನಿಲ್ಲಿಸದೇ, ಮುಂದೆ ನಿಂತಿದ್ದ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಬಿ. ಎಮ್ ಮನಸಾಲಿ ಅವರ ಬೈಕಿಗೆ ಡಿಕ್ಕಿಪಡಿಸಿದ್ದಾನೆ. ಆಟೋ ಗುದ್ದಿದ ಪರಿಣಾಮ ಮನಸಾಲಿ ಅವರಿಗೆ ಸಣ್ಣ ಗಾಯವಾಗಿದೆ.
ಇನ್ನು ಸ್ಥಳದಲ್ಲೇ ಇದ್ದ ಟ್ರಾಫಿಕ್ ಪೊಲೀಸರು ಧಾವಿಸಿ, ಬಿದ್ದಿದ್ದ ಟ್ರಾಫಿಕ್ ಪೊಲೀಸ್ ಮನಸಾಲಿ ಅವರನ್ನು ಎತ್ತಿ ಆಟೋ ಚಾಲಕನಿಗೆ ಬುದ್ದಿ ಹೇಳಿ ಕಳುಹಿಸಿದ್ದಾರೆ.
Kshetra Samachara
18/12/2020 11:43 am