ಕಲಘಟಗಿ:ತಾಲೂಕಿನ ದ್ಯಾವನಕೊಂಡ ಗ್ರಾಮದ ಮೀಸೆಗೌಡರ ಕೆರೆಯ ಸೇತುವೆಯ ಕಂದಕದಲ್ಲಿ ದ್ವಿಚಕ್ರ ವಾಹನ ಸವಾರ
ಬಿದ್ದು,ತೀವ್ರ ಗಾಯಗೊಂಡ ಘಟನೆ ಸೋಮವಾರ ರಾತ್ರಿ ಜರುಗಿದೆ.
ತಾಲೂಕಿನ ಮುಕ್ಕಲ್ ಗ್ರಾಮದ ಹನುಮಂತ ಹೊರಕೆರಿ ಎಂಬ ವ್ಯಕ್ತಿಯನ್ನು ಗ್ರಾಮಸ್ಥರು ರಕ್ಷಿಸಿ ಅಂಬ್ಯುಲನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ.ಹಿಂಡಸಗೇರಿಯ ತಂಗಿಯ ಮಗಳಿಗೆ ಗೌರಿ ಹುಣ್ಣಿಮೆಗೆ ಸಕ್ಕರೆ ಗೊಂಬೆ ತೆಗೆದುಕೊಂಡ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಅತೀಯಾದ ಮಳೆಗೆ ಕೆರೆ ತುಂಬಿ ಹರಿದು ಸೇತುವೆ ಕಿತ್ತು ಕಂದಕ ನಿರ್ಮಾಣವಾಗಿತ್ತು, ಇದನ್ನು ಸರಿಪಡಿಸದೇ ಇರವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
Kshetra Samachara
30/11/2020 10:01 pm