ಧಾರವಾಡ: ಒಮ್ಮೊಮ್ಮೆ ನಗೆಚಾಟಿಕೆಗಳು ದೊಡ್ಡ ಅನಾಹುತಕ್ಕೆ ಕಾರಣವಾಗುತ್ತವೆ ಎಂಬುದಕ್ಕೆ ತಾಜಾ ಉದಾಹರಣೆಯೊಂದು ಧಾರವಾಡದಲ್ಲಿ ನಡೆದಿದೆ.
ಸಹೋದರಿ ಹಾಗೂ ಸಹೋದರನ ಮಧ್ಯೆ ನಡೆದ ನಗೆಚಾಟಿಕೆ ಸಹೋದರನ ಜೀವವನ್ನೇ ಬಲಿ ಪಡೆದಿರುವ ಘಟನೆ ಗೊಲ್ಲರ ಕಾಲೊನಿಯಲ್ಲಿ ನಡೆದಿದೆ.
ಗಣೇಶ ಗೊಲ್ಲರ (14) ಎಂಬ ಬಾಲಕನೇ ಸಾವಿಗೀಡಾದ ದುರ್ದೈವಿಯಾಗಿದ್ದಾನೆ. ಮನೆಯಲ್ಲಿ ಖುರ್ಚಿ ಮೇಲೆ ಕುಳಿತಿದ್ದ ಗಣೇಶನನ್ನು ಆತನ ಸಹೋದರಿ ಆಟವಾಡುತ್ತ, ಕೆಳಕ್ಕೆ ನೂಕಿದ್ದಾಳೆ ಕೆಳಗೆ ಬಿದ್ದ ಗಣೇಶನ ತಲೆಗೆ ಛತ್ರಿಯ ಕಡ್ಡಿ ನಟ್ಟಿದೆ.
ಕಡ್ಡಿ ಮೂರ್ನಾಲ್ಕು ಇಂಚು ತಲೆಯೊಳಗೆ ಹೋಗಿ ತೀವ್ರ ರಕ್ತಸ್ರಾವವಾಗಿದೆ. ಮನೆಯವರು ಕಡ್ಡಿಯನ್ನೇನೋ ಹೊರಕ್ಕೆ ತೆಗೆದಿದ್ದಾರೆ.
ಆದರೆ, ರಕ್ತಸ್ರಾವ ನಿಲ್ಲದೇ ಇದ್ದಿದ್ದರಿಂದ ಕೂಡಲೇ ಆತನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಗಣೇಶ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
Kshetra Samachara
28/11/2020 07:20 pm